ಉಳ್ಳಾಲ (ದಕ್ಷಿಣ ಕನ್ನಡ): ಅನ್ಯಧರ್ಮೀಯರ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸಮೀಪದ ಕುತ್ತಾರಿನ ಕೊರಗಜ್ಜ ಕ್ಷೇತ್ರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಕೋಮು ದ್ವೇಷ ಹುಟ್ಟಿಸುವ ಹೇಳಿಕೆ ನೀಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉಳ್ಳಾಲದ ಅಬ್ದುಲ್ ರಶೀದ್ ಭಾನುವಾರ ದೂರು ನೀಡಿದ್ದರು.
ವಿಶ್ವ ಹಿಂದೂಪರಿಷತ್ ಏರ್ಪಡಿಸಿದ್ದ ‘ನಮ್ಮ ನಡಿಗೆ ಕೊರಗಜ್ಜನ ಕಡೆಗೆ’ ಕಾರ್ಯಕ್ರಮದ ಸಮಾರೋಪದಲ್ಲಿ ಭಾಷಣ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ, ‘ಮತಾಂತರ ಆಗುತ್ತಿದೆ ಎಂದು ಎಷ್ಟು ದಿನ ಬಡಿದಾಡುವುದು? ಘರ್ ವಾಪ್ಸಿ ಮಾಡೋದು ಹೇಗೆ ಎಂದು ಮನೆ ಮನೆಗೂ ಕಲಿಸಿಕೊಡೋಣ. ಯಾವುದೊ ರೀಲ್ ಮಾಡುತ್ತೀರಿ. ಘರ್ ವಾಪ್ಸಿ ಬಗ್ಗೆ ರೀಲ್ ಮಾಡಿ. ಎಲ್ಲಿವರೆಗೆ ‘ಲವ್ ಜಿಹಾದ್’ ಬಗ್ಗೆ ಮಾತನಾಡುತ್ತಾ ಇರುವುದು? ನಮ್ಮ ಗಂಡು ಮಕ್ಕಳಿಗೂ ಹೇಳೋಣ, ಎಷ್ಟು ದಿನ ಅಂತ ನಮ್ಮದೇ ಹೆಣ್ಣು ಮಕ್ಕಳನ್ನೇ ನೋಡುತ್ತಿರುತ್ತೀಯಪ್ಪಾ. ಹುಡುಗಿ ಸಿಗಲಿಲ್ಲ ಎಂದು ಎಷ್ಟು ದಿನ ಹೇಳುತ್ತಿಯಾ. ಸ್ವಲ್ಪ ಬೇರೆಯವರನ್ನೂ ನೋಡ್ರಲ್ಲ. ಇನ್ನು ನಾವು ಅಗ್ರೆಸಿವ್ ಮಾರ್ಗದಲ್ಲಿ ಹೋಗಬೇಕು. ರಕ್ಷಣಾತ್ಮಕ ತಂತ್ರದ ಕಾಲ ನಿಂತುಹೋಗಿದೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.