ADVERTISEMENT

ಕಾಸರಗೋಡು: ದಿನ ಬಿಟ್ಟು ದಿನ ಮೀನುಗಾರಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 15:38 IST
Last Updated 4 ಆಗಸ್ಟ್ 2020, 15:38 IST

ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ದಿನ ಬಿಟ್ಟು ದಿನ ಮೀನುಗಾರಿಕೆಗೆ ತೆರಳುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

ಕೋವಿಡ್–19 ಸೋಂಕಿನಿಂದಾಗಿ ಮೀನುಗಾರಿಕೆ, ಮಾರಾಟಕ್ಕೆ ಸಂಬಂಧಿಸಿದ ವಲಯಗಳ ಪ್ರತಿನಿಧಿಗಳ ಜತೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಈ ಸೂಚನೆ ನೀಡಿದರು.

ಸಮ ಸಂಖ್ಯೆಯಲ್ಲಿ ಕೊನೆಗೊಳ್ಳುವ ನೋಂದಣಿ ಇರುವ ಬೋಟ್‌ಗಳು ಸೋಮವಾರ, ಬುಧವಾರ ಶುಕ್ರವಾರ ಹಾಗೂ ಬೆಸ ಸಂಖ್ಯೆಯಲ್ಲಿ ಕೊನೆಗೊಳ್ಳುವ ಬೋಟ್‌ಗಳು ಮಂಗಳವಾರ, ಗುರುವಾರ, ಶನಿವಾರ ಮೀನುಗಾರಿಕೆ ನಡೆಸಬಹುದು. ಶುಕ್ರವಾರ ರಜೆ ಇರುವ ಪ್ರದೇಶದಲ್ಲಿನ ಸಮ ಸಂಖ್ಯೆಯ ಬೋಟ್‌ಗಳು ಭಾನುವಾರ ಮೀನುಗಾರಿಕೆ ನಡೆಸಬಹುದು ಎಂದು ತಿಳಿಸಿದರು.

ADVERTISEMENT

ಸಮುದ್ರದಿಂದ ಹಿಡಿದು ತಂದ ಮೀನುಗಳ ಮಾರಾಟ ಹಾಗೂ ನಿರ್ವಹಣೆಯನ್ನು ಬಂದರು ಮೀನುಗಾರಿಕೆ, ಫಿಶ್‌ ಲ್ಯಾಂಡಿಂಗ್‌ ಸೆಂಟರ್‌ಗಳು, ಬಂದರು ನಿರ್ವಹಣಾ ಸೊಸೈಟಿಗಳು ಜನಪರ ಸಮಿತಿಗಳ ನೇತೃತ್ವದಲ್ಲಿ ನಡೆಸಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.