ADVERTISEMENT

ಗಾಂಧಿ ವಿಚಾರಧಾರೆ ಕೊಂದವ ಗೋಡ್ಸೆ: ಎ.ಸಿ.ವಿನಯ ರಾಜ್

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:53 IST
Last Updated 10 ಆಗಸ್ಟ್ 2025, 5:53 IST
ಮಂಗಳೂರಿನ ಟ್ಯಾಗೋರ್ ಉದ್ಯಾನದಲ್ಲಿ ನಡೆದ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಪ್ರೊ. ರಾಜಲಕ್ಷ್ಮಿ ಮಾತನಾಡಿದರು
ಮಂಗಳೂರಿನ ಟ್ಯಾಗೋರ್ ಉದ್ಯಾನದಲ್ಲಿ ನಡೆದ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಪ್ರೊ. ರಾಜಲಕ್ಷ್ಮಿ ಮಾತನಾಡಿದರು   

ಮಂಗಳೂರು: ಅಹಿಂಸಾ ತತ್ವದ ಪ್ರತಿಪಾದಕರಾಗಿದ್ದ ಮಹಾತ್ಮ ಗಾಂಧಿ ಅವರನ್ನು ಕೊಲೆ ಮಾಡಿದ ನಾಥೂರಾಂ ಗೋಡ್ಸೆ, ಜೊತೆಗೆ ಗಾಂಧೀಜಿ ತತ್ವಗಳಾದ ಒಗ್ಗಟ್ಟಿನಲ್ಲಿ ಬಲ, ವಿವಿಧತೆಯಲ್ಲಿ ಏಕತೆ, ಅಹಿಂಸಾ ತತ್ವವನ್ನೂ ಕೊಂದಿದ್ದಾರೆ ಎಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಎ.ಸಿ.ವಿನಯ ರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಗರದ ಟ್ಯಾಗೋರ್ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಕ್ವಿಟ್ ಇಂಡಿಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕಿ ರಾಜಲಕ್ಷ್ಮಿ ವಿಶೇಷ ಉಪನ್ಯಾಸ ನೀಡಿದರು. 

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಬಿ.ಪ್ರಭಾಕರ ಶ್ರೀಯಾನ್, ಇಬ್ರಾಹಿಂ ಕೋಡಿಜಾಲ್, ಪ್ರೊ. ಶಿವರಾಂ ಶೆಟ್ಟಿ, ಚಂದ್ರನಾಥ್ ಸಾಲಿಯಾನ್, ಉದಯ್ ಕುಮಾರ್, ವಿಜಯ್ ಕೋಡಿಕಲ್ ಉಪಸ್ಥಿತರಿದ್ದರು.

ADVERTISEMENT

ಪ್ರೊ. ಇಸ್ಮಾಯಿಲ್ ಎನ್ ಸ್ವಾಗತಿಸಿದರು. ಪ್ರೇಮಚಂದ್ ವಂದಿಸಿದರು. ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.