ADVERTISEMENT

‘ಹಿಂದೂ ಮಹಾಸಭಾ: ಮಂಗಳೂರಿನಲ್ಲಿ ಮಹಾಯಾಗ’

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 13:51 IST
Last Updated 6 ಜನವರಿ 2025, 13:51 IST

ಮಂಗಳೂರು: ಸರ್ವರ ಒಳಿತಿಗಾಗಿ ಮಂಗಳೂರಿನಲ್ಲಿ ಮಹಾಯಾಗ ಹಮ್ಮಿಕೊಳ್ಳಲು ಅಖಿಲ ಭಾರತ ಹಿಂದೂ ಮಹಾಸಭಾ ಯೋಚಿಸಿದೆ ಎಂದು ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ ಹೇಳಿದರು. 

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ತ್ರಿಚಂಡಿ ಮಹಾರಾಜ್ ಆಯ್ಕೆಯಾಗಿದ್ದಾರೆ. ರಾಜ್ಯ ಘಟಕದ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಶೀಘ್ರದಲ್ಲಿ ಜಿಲ್ಲಾ ಸಮಿತಿ ರಚನೆ ಮಾಡಲಾಗುವುದು. ಮಂಗಳೂರು ಮತ್ತು ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ರಾಜ್ಯ ಕಾರ್ಯದರ್ಶಿ ಪುನೀತ್ ಸುವರ್ಣ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಹಿಂದೂಗಳ ರಕ್ಷಣೆಗಾಗಿ ಇರುವ ಪಕ್ಷ ಅಖಿಲ ಭಾರತ ಹಿಂದೂ ಮಹಾಸಭಾ ಮಾತ್ರ. ಹಿಂದೂ ರಾಷ್ಟ್ರ ನಿರ್ಮಾಣ ನಮ್ಮ ಉದ್ದೇಶ ನಾಥೂರಾಮ್ ಗೋಡ್ಸೆ ನಮ್ಮ ಪಕ್ಷದವರು ಎಂದು ಈಗಾಗಲೇ ಒಪ್ಪಿಕೊಂಡಿದ್ದೇವೆ. ಬೇರೆ ಧರ್ಮಗಳ ಬಗ್ಗೆ ನಮಗೆ ದ್ವೇಷವಿಲ್ಲ, ಆದರೆ, ನಮ್ಮ ವಿರುದ್ಧ ಮಾತನಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದರು.

ADVERTISEMENT

ರಾಜ್ಯ ಘಟಕದ ಅಧ್ಯಕ್ಷ ಸುರೇಂದ್ರ ಬಾಬು ಬಿ.ಎಸ್., ಪ್ರಮುಖರಾದ ಮೋಹನ್ ಕುಮಾರ್, ಕೆ.ಕೆ.ದಿನೇಶ್, ಸೌಮ್ಯಾ ಆರ್., ಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.