
ಸುಬ್ರಹ್ಮಣ್ಯ: ಭಜನೆಯಿಂದ ಜ್ಞಾನ, ಏಕಾಗ್ರತೆ ಮತ್ತು ಮಾನಸಿಕ ನೆಮ್ಮದಿ ಲಭಿಸುತ್ತದೆ. ಸಾಮರಸ್ಯ ಮತ್ತು ಒಗ್ಗಟ್ಟು ಬೆಳೆಯಲು ಭಜನೆಯಂತಹ ಕಾರ್ಯಕ್ರಮಗಳು ಅಗತ್ಯ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭಜನೆಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲ್ಲೂಕು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸುಬ್ರಹ್ಮಣ್ಯ, ಮಂಜುನಾಥೇಶ್ವರ ಭಜನಾ ಪರಿಷತ್, ತಾಲ್ಲೂಕು ಭಜನೋತ್ಸವ ಸಮಿತಿ ಸುಬ್ರಹ್ಮಣ್ಯದ ಸಹಯೋಗದಲ್ಲಿ ಕುಕ್ಕೆಸುಬ್ರಹ್ಮಣ್ಯದಲ್ಲಿ ನಡೆದ ತಾಲ್ಲೂಕು ಭಜನೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಭಜನೋತ್ಸವ ಸಮಿತಿ ಗೌರವಾಧ್ಯಕ್ಷ ಗಿರಿಧರ ಸ್ಕಂದ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ರವಿ ಕಕ್ಕೆಪದವು, ಬಾಬು ನಾಯ್ಕ, ವೆಂಕಟ್ ವಳಲಂಬೆ, ಸುರೇಶ್ ಕಣೆಮರಡ್ಕ, ಬಾಲಕೃಷ್ಣ ಪುತ್ಯ, ಯತೀಶ್ ರೈ ದುಗ್ಗಲಡ್ಕ, ಸೋಮಶೇಖರ್ ಪೈಕ, ಚಂದ್ರಶೇಖರ ಕೊಂದಾಳ, ಸತೀಶ್ ಟಿ.ಎನ್.ಕಲ್ಮಕಾರು, ಸಂತೋಷ್ ಅಳಿಯೂರು, ಮಾಧವ ಚಾಂತಾಳ, ರಾಧಾಕೃಷ್ಣ ಬೊಳ್ಳೂರು, ವಿಮಲಾ ರಂಗಯ್ಯ, ತೀರ್ಥರಾಮ ದೋಣಿಪಳ್ಳ, ಗಣೇಶ್ ಪ್ರಸಾದ್ ಎನ್., ಮಾಧವ ಗೌಡ, ಗಿರೀಶ್ ಆಚಾರ್ಯ ಪೈಲಾಜೆ, ಚಂದ್ರಶೇಖರ ಬಸವನಮೂಲೆ, ಬಾಲಕೃಷ್ಣ ಕೆ. ಭಾಗವಹಿಸಿದ್ದರು.
ಹಿರಿಯ ಭಜಕರಿಗೆ ಗೌರವಾರ್ಪಣೆ: ಕಾರ್ಯಕ್ರಮದಲ್ಲಿ ಹಿರಿಯ ಭಜಕಾರದ ಎ.ವೆಂಕಟ್ರಾಜ್ ಸುಬ್ರಹ್ಮಣ್ಯ, ಕಲಾವಿದ ಕೆ.ಯಜ್ಞೇಶ್ ಆಚಾರ್, ಹೊನ್ನಮ್ಮ ಹರಿಹರ, ದೇವಕಿ ಬಾಳುಗೋಡು, ನಾರಾಯಣ ಕೊಲ್ಲಮೊಗ್ರ, ಬಾಲಕೃಷ್ಣ ಕಲ್ಮಕಾರು ಅವರನ್ನು ಸನ್ಮಾನಿಸಲಾಯಿತು.
ಭಜನಾ ತಂಡ, ಶೌರ್ಯ ವಿಪತ್ತು ಘಟಕ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಗೌರವಿಸಲಾಯಿತು. ಯೋಜನಾಧಿಕಾರಿ ಮಾಧವ ಗೌಡ, ಭಜನೋತ್ಸವ ಸಮಿತಿ ಅಧ್ಯಕ್ಷ ರವಿ ಕಕ್ಕೆಪದವು, ಗೌರವಾಧ್ಯಕ್ಷ ಗಿರಿಧರ ಸ್ಕಂದ ಅವರನ್ನು ಸನ್ಮಾನಿಸಲಾಯಿತು. ಗೌರವ ಸಲಹೆಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.