ADVERTISEMENT

ಶಿಕ್ಷಣ ನೀತಿ ಕಾರ್ಯಕ್ರಮಕ್ಕೆ ಎಬಿವಿಪಿಗೆ ಮಾತ್ರ ಆಹ್ವಾನ: ಎನ್ಎಸ್‌ಯುಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 8:08 IST
Last Updated 31 ಆಗಸ್ಟ್ 2020, 8:08 IST
   

ಮಂಗಳೂರು: ಮಂಗಳೂರು ವಿವಿ ವತಿಯಿಂದ ಶಿಕ್ಷಣ ನೀತಿ ಕುರಿತು ಆಯೋಜಿಸಿರುವ ಕಾರ್ಯಕ್ರಮಕ್ಕೆ ಎಬಿವಿಪಿಗೆ ಮಾತ್ರ ಆಹ್ವಾನ ನೀಡಿರುವುದನ್ನು ಖಂಡಿಸಿ ಎನ್ಎಸ್‌ಯುಐ ಜಿಲ್ಲಾ ಘಟಕದ ವತಿಯಿಂದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ಎದುರು ಪ್ರತಿಭಟನೆ ನಡೆಸಲಾಯಿತು.

ಕುಲಪತಿಗಳು ಎಬಿವಿಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಎಬಿವಿಪಿಗೆ ಮಾತ್ರ ಆಹ್ವಾನ ನೀಡಿ, ಬೇರೆ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ದೂರಿದರು.

ಸಂಸತ್ತಿನಲ್ಲಿ ಚರ್ಚಿಸದೇ, ರಾಜ್ಯ ಸರ್ಕಾರಗಳ‌ ಜತೆ ಸಮಾಲೋಚಿಸದೇ ಏಕಾಏಕಿ ಶಿಕ್ಷಣ ನೀತಿ‌ ಜಾರಿಗೊಳಿಸುವ‌ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣದ ಕೇಸರಿಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.