ADVERTISEMENT

ಜೆಇಇ ಮೇನ್ಸ್: ಎಕ್ಸ್‌ಪರ್ಟ್‌ನ ನಾಲ್ವರು ವಿದ್ಯಾರ್ಥಿಗಳಿಗೆ 100 ಪರ್ಸಂಟೈಲ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 23:51 IST
Last Updated 13 ಫೆಬ್ರುವರಿ 2024, 23:51 IST
ಪ್ರತೀಕ್ ಗೌಡ
ಪ್ರತೀಕ್ ಗೌಡ   

ಮಂಗಳೂರು: ಎಂಜಿನಿಯರಿಂಗ್ ಪ್ರವೇಶಕ್ಕೆ ರಾಷ್ಟ್ರ ಮಟ್ಟದಲ್ಲಿ ನಡೆಸುವ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಇಲ್ಲಿನ ಕೊಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಭೌತವಿಜ್ಞಾನದಲ್ಲಿ ಮತ್ತು ಒಬ್ಬ ವಿದ್ಯಾರ್ಥಿ ರಸಾಯನ ವಿಜ್ಞಾನದಲ್ಲಿ 100 ಪರ್ಸಂಟೈಲ್ ದಾಖಲಿಸಿದ್ದಾರೆ. 

ಪ್ರತೀಕ್ ಪಿ. ಗೌಡ (ರಸಾಯನ ವಿಜ್ಞಾನದಲ್ಲಿ 100 ಪರ್ಸಂಟೈಲ್, ಒಟ್ಟು 99.5733606 ಪರ್ಸಂಟೈಲ್), ಭೌತ ವಿಜ್ಞಾನದಲ್ಲಿ 100 ಪರ್ಸಂಟೈಲ್ ಪಡೆದ ಸುಜನ್ ಶಿವಾನಂದ ಮುಳ್ಳಟ್ಟಿ (ಒಟ್ಟು 99.4584867), ಸಂಜನ್ ಡಿ. (ಒಟ್ಟು 99.414274), ಸಾತ್ವಿಕ್ ಅಖಿಲ್ ಶರ್ಮಾ (ಒಟ್ಟು 96.7868736) ಉತ್ತಮ ಸಾಧನೆ ಮಾಡಿದ್ದಾರೆ. ಸಂಸ್ಥೆಯ ಒಟ್ಟು 28 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಹೆಚ್ಚು ಅಂಕ ಪಡೆದಿದ್ದಾರೆ.  

ಜನವರಿಯಲ್ಲಿ ನಡೆದ ಜೆಇಇ ಪರೀಕ್ಷೆಯಲ್ಲಿ ಎಕ್ಸ್‌ಪರ್ಟ್‌ ಕಾಲೇಜಿನ 48 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 81 ವಿದ್ಯಾರ್ಥಿಗಳು 97 ಪರ್ಸಂಟೈಲ್‌ಗಿಂತ ಅಧಿಕ, 113 ವಿದ್ಯಾರ್ಥಿಗಳು 96 ಪರ್ಸಂಟೈಲ್‌ಗಿಂತ ಅಧಿಕ, 146 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 278 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

ADVERTISEMENT
ಸುಜನ್ ಶಿವಾನಂದ ಮುಳ್ಳಟ್ಟಿ
ಸಂಜನ್ ಡಿ
ಸ್ವಸ್ತಿಕ್ ಅಖಿಲ್ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.