
ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಹಮ್ಮಿಕೊಂಡಿದ್ದ ಅಂತರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರಿಗೆ ‘ಸ್ವಸ್ತಿ ಸಿರಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬಂಟ್ವಾಳ: ಗ್ರಾಮೀಣ ಕ್ರೀಡೆ ಕಬಡ್ಡಿಗೆ ವಿಶ್ವಮಾನ್ಯತೆ ದೊರೆತಿದ್ದು, ಯುವಜನತೆ ನಿಯಮಿತ ವ್ಯಾಯಾಮ ಮತ್ತು ಆಹಾರ ಸೇವನೆ ಮೂಲಕ ಆರೋಗ್ಯ ಕಾಯ್ದುಕೊಂಡಾಗ ಸಾಧನೆಯ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನ್ಯಾಯಾಧೀಶ ದಿನೇಶ್ ಹೆಗ್ಡೆ ಬದ್ಯಾರು ಹೇಳಿದರು.
ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಭಾನುವಾರ ಸಮಾಪನಗೊಂಡ 41ನೇ ವರ್ಷದ ಅಂತರ ರಾಜ್ಯ ಮಟ್ಟದ ಪುರುಷರ 55 ಕೆ.ಜಿ ಮತ್ತು 65 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿ ಮಂಜುನಾಥ ಆಚಾರ್ಯ, ನಿತ್ಯಾನಂದ ಪೂಜಾರಿ ಕೆಂತಲೆ, ಹರ್ಷೇಂದ್ರ ಟಿ.ಪೈ ಮಾತನಾಡಿದರು.
ವಿಶ್ವಕಪ್ ವಿಜೇತ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರಿಗೆ ‘ಸ್ವಸ್ತಿಸಿರಿ’ ಪ್ರಶಸ್ತಿ ಮತ್ತು ನಾಟಿ ವೈದ್ಯ ತಿಮ್ಮಪ್ಪ ಪೂಜಾರಿ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಜಲಜಾಕ್ಷಿ ಬಂಗೇರ, ಮುಕ್ತಾ ಶೆಟ್ಟಿ, ದೀಕ್ಷಿತ್ ಬಳ್ಳಮಂಜ ಅವರಿಗೆ ಸ್ವಸ್ತಿಕ್ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಮುಖರಾದ ಕೆ.ಮೋನಪ್ಪ ಪೂಜಾರಿ, ಜಯಚಂದ್ರ ಬೊಳ್ಮಾರ್, ಕೆ.ಕರುಣೇಂದ್ರ ಪೂಜಾರಿ, ಅಬ್ದುಲ್ ನಝೀರ್ ಸಾಹೇಬ್, ಚಂದ್ರಶೇಖರ ಶೆಟ್ಟಿಗಾರ್, ಕಾಂತಪ್ಪ ಕರ್ಕೇರ, ಹರೀಶ ಪ್ರಭು, ಪ್ರಮೋದ್, ಸಂಘದ ಗೌರವಾಧ್ಯಕ್ಷ ಅಬ್ದುಲ್ಲ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಸಂಚಾಲಕ ರಾಜೇಶ ಪಿ.ಬಂಗೇರ, ಸಹ ಸಂಚಾಲಕ ಅಬ್ದುಲ್ ಹಮೀದ್, ಮಾಜಿ ಅಧ್ಯಕ್ಷ ಮಾಧವ ಬಂಗೇರ, ರಫೀಕ್, ಪುರುಷೋತ್ತಮ ಶೆಟ್ಟಿಗಾರ್ ಭಾಗವಹಿಸಿದ್ದರು.
ಪ್ರಭಾಕರ ಪಿ.ಎಂ. ಸ್ವಾಗತಿಸಿ, ಫ್ರಾನ್ಸಿಸ್ ವಿ.ವಿ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.