ADVERTISEMENT

ಕಡಬ: ಪಟ್ಟಣ ಪಂಚಾಯಿತಿ ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 7:05 IST
Last Updated 17 ಆಗಸ್ಟ್ 2025, 7:05 IST
ಚುನಾವಣಾ ಸಿಬ್ಬಂದಿ ಮತಯಂತ್ರದೊಂದಿಗೆ ಶನಿವಾರ ಮತಗಟ್ಟೆಗಳಿಗೆ ತೆರಳಿದರು
ಚುನಾವಣಾ ಸಿಬ್ಬಂದಿ ಮತಯಂತ್ರದೊಂದಿಗೆ ಶನಿವಾರ ಮತಗಟ್ಟೆಗಳಿಗೆ ತೆರಳಿದರು   

ಕಡಬ (ಉಪ್ಪಿನಂಗಡಿ): ಕಡಬ ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳಿಗೆ ಭಾನುವಾರ ಚುನಾವಣೆ ನಡೆಯಲಿದ್ದು ತಾಲ್ಲೂಕು ಆಡಳಿತ ಸೌಧದಲ್ಲಿ ತೆರೆದಿರುವ ಸ್ಟ್ರಾಂಗ್ ರೂಮ್‌ನಲ್ಲಿ ಶನಿವಾರ ಮಸ್ಟರಿಂಗ್ ಕಾರ್ಯ ನಡೆಯಿತು.

ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಒ, 3 ಮಂದಿ ಸಿಬ್ಬಂದಿ ಹಾಗೂ ಒಬ್ಬರು ಡಿ ಗ್ರೂಪ್‌ ನೌಕರ ಇರುತ್ತಾರೆ. ಮಸ್ಟರಿಂಗ್‌ಗಾಗಿ ತಾಲ್ಲೂಕು ಆಡಳಿತ ಸೌಧಕ್ಕೆ ಎಲ್ಲ ಮತಗಟ್ಟೆ ಸಿಬ್ಬಂದಿ ಬಂದಿದ್ದು ಶನಿವಾರ ಸಂಜೆಯಾಗುವಷ್ಟರಲ್ಲಿ ಮತಯಂತ್ರದೊಂದಿಗೆ ಮತಗಟ್ಟೆಗಳಿಗೆ ತೆರಳಿದರು. ತಹಶೀಲ್ದಾರ್ ಪ್ರಭಾಕರ ಖಜೂರೆ, ಉಪ ತಹಶೀಲ್ದಾರ್ ಶಾಯಿದುಲ್ಲಾ ಖಾನ್, ಚುನಾವಣಾಧಿಕಾರಿಗಳಾದ ಪ್ರಮೋದ್ ಕುಮಾರ್, ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿಗಳಾದ ಭುವನೇಂದ್ರ ಕುಮಾರ್, ಸಂದೇಶ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಂಗಪ್ಪ ಹುಕ್ಕೇರಿ, ಪಟ್ಟಣ ಪಂಚಾಯಿತಿ ಎಂಜಿನಿಯರ್ ಶಿವಕುಮಾರ್ ಭಾಗವಹಿಸಿದ್ದರು.

ಪೊಲೀಸ್ ಬಂದೋಬಸ್ತ್: ಚುನಾವಣೆ ನಡೆಯುವುದರಿಂದ ಸರ್ಕಲ್ ಇನ್‌ಸ್ಪೆಕ್ಟರ್, ಇಬ್ಬರು ಎಸ್‌ಐ, ನಾಲ್ವರು ಎಎಸ್‌ಐ, ಒಟ್ಟು 38 ಮಂದಿ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ರನ್ನು ನಿಯೋಜಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಎಸ್ ರವಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.