ADVERTISEMENT

ಹುಲಿ ವೇಷ ಸ್ಪರ್ಧೆ: ಕಲ್ಲಡ್ಕ ಟೈಗರ್ಸ್‌ ಫ್ರೆಂಡ್ಸ್‌ ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 5:17 IST
Last Updated 3 ಅಕ್ಟೋಬರ್ 2022, 5:17 IST
 ಪ್ರಥಮ ಸ್ಥಾನ ಪಡೆದ `ಟೈಗರ್ಸ್ ಫ್ರೆಂಡ್ಸ್ ಕಲ್ಲಡ್ಕ' ತಂಡ ಪ್ರಶಸ್ತಿ ಸ್ವೀಕರಿಸುತ್ತಿರುವುದು.
 ಪ್ರಥಮ ಸ್ಥಾನ ಪಡೆದ `ಟೈಗರ್ಸ್ ಫ್ರೆಂಡ್ಸ್ ಕಲ್ಲಡ್ಕ' ತಂಡ ಪ್ರಶಸ್ತಿ ಸ್ವೀಕರಿಸುತ್ತಿರುವುದು.   

ಪುತ್ತೂರು: ನಗರದ ಕಿಲ್ಲೆ ಮೈದಾನದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಾರಥ್ಯದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ‘ಪುತ್ತೂರ್ದ ಪಿಲಿರಂಗ್’ ಹುಲಿ ವೇಷ ಸ್ಪರ್ಧೆಯಲ್ಲಿ ಕಲ್ಲಡ್ಕದಟೈಗರ್ಸ್ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದಿದೆ.

‘ಪುತ್ತೂರ್ದ ಪಿಲಿರಂಗ್’ ಟ್ರೋಫಿ ಮತ್ತು ₹1ಲಕ್ಷ ಬಹುಮಾನ ಪಡೆದಿದೆ. ದ್ವಿತೀಯ ಬಹುಮಾನವನ್ನು ಪುತ್ತೂರಿನ ಕಲ್ಲೇಗ ಟೈಗರ್ಸ್ ಪಡೆದಿದ್ದು, ₹50 ಸಾವಿರ ನಗದು ದೊರೆತಿದೆ.

ಸ್ಪರ್ಧೆಯಲ್ಲಿ ಒಟ್ಟು 6 ಹುಲಿವೇಷ ತಂಡಗಳು ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿಟ್ಲದ `ಉಮಾನಾಥೇಶ್ವರ ಟೈಗರ್ಸ್’ ತಂಡ, ಪುತ್ತೂರು ತಾಲ್ಲೂಕಿನ ನೆಹರೂ ನಗರದ ‘ಮುರಳೀ ಬ್ರದರ್ಸ್’ ತಂಡ, ಮಂಗಳೂರಿನ ‘ಅಂಗಾರಗುಡ್ಡೆ ಫ್ರೆಂಡ್ಸ್’ ತಂಡ ಮತ್ತು ಮೂಲ್ಕಿಯ ‘ಅಯ್ಯಪ್ಪ ಟೈಗರ್ಸ್’ ತಂಡಕ್ಕೆ ₹25 ಸಾವಿರ ಪ್ರೋತ್ಸಾಹಕ ಬಹುಮಾನ ನೀಡಲಾಗಿದೆ.
ವಿಶೇಷ ಆಕರ್ಷಣೆಯಾಗಿ ಉಡುಪಿಯ ಸುಷ್ಮರಾಜ್ ನೇತೃತ್ವದ ಮಹಿಳಾ ಹುಲಿವೇಷ ತಂಡದಿಂದ ಮತ್ತು ಮೂಲ್ಕಿಯ ಹುಲಿವೇಷ ತಂಡದಿಂದ ಹುಲಿ ಕುಣಿತ ಪ್ರದರ್ಶನ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.