ADVERTISEMENT

ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್ ಡಿಜಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 15:51 IST
Last Updated 30 ಮಾರ್ಚ್ 2022, 15:51 IST
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಕರ್ಣಾಟಕ ಬ್ಯಾಂಕ್‌ ಡಿಜಿ ಕೇಂದ್ರವನ್ನು ಬ್ಯಾಂಕಿನ ಮುಖ್ಯ ವಹಿವಾಟು ಅಧಿಕಾರಿ ಗೋಕುಲ್ ದಾಸ್ ಪೈ ಉದ್ಘಾಟಿಸಿದರು.
ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಕರ್ಣಾಟಕ ಬ್ಯಾಂಕ್‌ ಡಿಜಿ ಕೇಂದ್ರವನ್ನು ಬ್ಯಾಂಕಿನ ಮುಖ್ಯ ವಹಿವಾಟು ಅಧಿಕಾರಿ ಗೋಕುಲ್ ದಾಸ್ ಪೈ ಉದ್ಘಾಟಿಸಿದರು.   

ಮಂಗಳೂರು: ನಗರದ ಮಣ್ಣಗುಡ್ಡೆಯಲ್ಲಿ ಕರ್ಣಾಟಕ ಬ್ಯಾಂಕ್ ಅತ್ಯಾಧುನಿಕ ಡಿಜಿ ಕೇಂದ್ರವನ್ನು ಆರಂಭಿಸಿದ್ದು, ಬ್ಯಾಂಕಿನ ಮುಖ್ಯ ವಹಿವಾಟು ಅಧಿಕಾರಿ ಗೋಕುಲ್ ದಾಸ್ ಪೈ ಉದ್ಘಾಟಿಸಿದರು.

ಈ ಡಿಜಿ ಕೇಂದ್ರವು ಗ್ರಾಹಕರಿಗೆ ಉಳಿತಾಯ ಬ್ಯಾಂಕ್ ಖಾತೆ ತೆರೆಯುವುದು, ಡೆಬಿಟ್ ಕಾರ್ಡ್‌ಗಳ ವಿತರಣೆ, ಕ್ಯಾಶ್ ವಿಥ್‌ಡ್ರಾವಲ್, ಕ್ಯಾಶ್ ಡೆಪಾಸಿಟ್, ಸಣ್ಣ ಸಾಲಗಳ ತ್ವರಿತ ಮಂಜೂರಾತಿ ಮುಂತಾದ ಸೇವೆಗಳನ್ನು ಒದಗಿಸುತ್ತದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್., ‘2017 ರಲ್ಲಿ ಬ್ಯಾಂಕ್ ‘ಕೆಬಿಎಲ್ ವಿಕಾಸ್’ ಎನ್ನುವ ಹೆಸರಿನಲ್ಲಿ ಪ್ರಾರಂಭಿಸಿದ ಸಮಗ್ರ ಪರಿವರ್ತನೆಯ ಪ್ರಕ್ರಿಯೆಯು, ಡಿಜಿಟಲ್ ವ್ಯವಹಾರಗಳ ಅನುಷ್ಠಾನದಲ್ಲಿ ಬ್ಯಾಂಕ್‌ ಅನ್ನು ಮುಂಚೂಣಿಗೆ ತಂದಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಡಿಜಿ ಕೇಂದ್ರವು ಗ್ರಾಹಕಸ್ನೇಹಿ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು, ಉಳಿತಾಯ ಖಾತೆ ತೆರೆಯುವುದು, ಡೆಬಿಟ್ ಕಾರ್ಡ್‌ಗಳ ವಿತರಣೆ, ಕ್ಯಾಶ್ ವಿಥ್‌ಡ್ರಾವಲ್, ಕ್ಯಾಶ್ ಡೆಪಾಸಿಟ್, ಸಣ್ಣ ಸಾಲಗಳ ತ್ವರಿತ ಮಂಜೂರಾತಿ ಮುಂತಾದ ಸೇವೆಗಳನ್ನು ಒದಗಿಸುತ್ತದೆ. ಸರಳ ಹಾಗೂ ಸುರಕ್ಷಿತವಾಗಿರುವ ಇಂತಹ ಡಿಜಿ ಕೇಂದ್ರಗಳನ್ನು ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ. ಈ ಎಲ್ಲ ಪ್ರಯತ್ನಗಳ ಫಲವಾಗಿ ನಮ್ಮ ಬ್ಯಾಂಕ್ ಭವಿಷ್ಯದ ಡಿಜಿಟಲ್ ಬ್ಯಾಂಕ್ ಆಗಿ ಹೊರಹೊಮ್ಮುವ ಭರವಸೆ ಇದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.