ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ನಡೆದ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಕಾರ್ಯಕರ್ತರಿಗೆ ಅಭಿನಂದನಾ ಸಭೆ ದೇವಾಲಯದ ಆವರಣದಲ್ಲಿ ನಡೆಯಿತು.
ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು.
ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಾಮಾಜಿಕ ಕಾರ್ಯಕರ್ತ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಮಾರೋಪ ಭಾಷಣ ಮಾಡಿದರು.
ನಿವೃತ್ತರಾಗುತ್ತಿರುವ ದೇವಾಲಯದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ನರಸಿಂಹ ಮಯ್ಯ ಅಭಿನಂದನಾ ಭಾಷಣ ಮಾಡಿದರು.
ಉದ್ಯಮಿ ಬಿ.ಕೆ.ಮಧೂರು, ದೇವಾಲಯದ ಅಧಿಕಾರಿ ಟಿ.ರಾಜೇಶ್, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಬ್ರಹ್ಮಕಲಶೋತ್ಸವ ಸಮಿತಿಯ ವಿವಿಧ ಪದಾಧಿಕಾರಿಗಳಾದ ಜಯದೇವ ಖಂಡಿಗೆ, ಶೋಭಾ ಗಟ್ಟಿ, ಬಿ.ನಾರಾಯಣಯ್ಯ ಭಾಗವಹಿಸಿದ್ದರು. ಸುನಿಲ್ ಕುದ್ರೆಪ್ಪಾಡಿ ಸ್ವಾಗತಿಸಿದರು. ಗಣೇಶ್ ಪಾರೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ನಂಬ್ರಾಣ ವರದಿ ವಾಚಿಸಿದರು.
‘ರಾಮನಾಯಕರ ಸಾಹಿತ್ಯ ಸೇವೆ ವಿಶಿಷ್ಟ’
ಕಾಸರಗೋಡು: ಸಾಹಿತ್ಯ ಸರಸ್ವತಿಯ ಮನಸ್ಸು ಹೊಂದಿದ್ದ ಬೇಕಲ ರಾಮನಾಯಕರ ಸೇವೆ ಸಾರ್ವಕಾಲಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಲೇಖಕ ಚಂದ್ರಹಾಸ ಎಂ.ಬಿ.ಚಿತ್ತಾರಿ ಹೇಳಿದರು.
ನಗರದ ನುಳ್ಳಿಪ್ಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಗ್ರಂಥಾಲಯ ಮತ್ತು ಕನ್ನಡ ಭವನದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕೊಡಗು ಜಿಲ್ಲಾ ಘಟಕ, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ನಡೆದ ಬೇಕಲ ರಾಮನಾಯಕ ಬದುಕು-ಬರಹ ಕುರಿತ ಸ್ಮರಣಾಂಜಲಿ ಕಾರ್ಯಮದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ಮುಖಂಡ ಕೆ.ಎನ್.ವೆಂಕಟ್ರಮಣ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು.
ಕವಿ ವಿರಾಜ್ ಅಡೂರು ಅಧ್ಯಕ್ಷತೆ ವಹಿಸಿದ್ದರು. ಮೇಘಾ ಶಿವರಾಜ್ ಕಾಸರಗೋಡು ಅವರ ‘ಮೌನ ಮಾತಾದಾಗ’ ಕೃತಿಯನ್ನು ರವೀಂದ್ರ ಜೆಪ್ಪು ಬಿಡುಗಡೆ ಮಾಡಿದರು. ಕೊಳ್ಚಪ್ಪೆ ಗೋವಿಂದ ಭಟ್ ಕೃತಿ ಕುರಿತು ಮಾತನಾಡಿದರು. ಪ್ರಮುಖರಾದ ಸೋಮು ಎಸ್.ಹಿಪ್ಪರಗಿ, ಬೊಳ್ಳಜಿರ ಬಿ.ಅಯ್ಯಪ್ಪ, ಕಮಲಾಕ್ಷ ಕಲ್ಲುಗುಡ್ಡೆ, ರುಬೀನಾ ಎಂ.ಎ., ಚಂದನ್ ನಂದರ ಬೆಟ್ಟು, ಅರುಣ್, ಲೋಹಿತ್ ಎಂ.ಆರ್., ಸಂಧ್ಯಾರಾಣಿ ಟೀಚರ್ ಭಾಗವಹಿಸಿದ್ದರು.
ಕೆ.ನರಸಿಂಹ ಭಟ್ ಏತಡ್ಕ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯರಾಜ ಪುಣಿಂಚತ್ತಾಯ ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ವಾಮನರಾವ್ ಬೇಕಲ್ ವಂದಿಸಿದರು.
‘ಕಾವ್ಯವು ಜನಜೀವನದ ಗತಿಬಿಂಬ’
ಕಾಸರಗೋಡು: ಕಾವ್ಯ ಎಂಬುದು ಯೋಧ, ವ್ಯಾಧ ನ್ಯಾಯಗಳ ಸಮ್ಮಿಲನ. ಅದು ಜನಜೀವನದ ಗತಿಬಿಂಬ ಎಂದು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ, ಜಿಲ್ಲಾ ಕನ್ನಡ ಲೇಖರ ಸಂಘ, ಸವಿ ಹೃದಯದ ಕವಿ ಮಿತ್ರರು ವತಿಯಿಂದ ಪೆರ್ಲ ವ್ಯಾಪಾರಿ ಭವನದಲ್ಲಿ ನಡೆದ ಕವಿ-ಕಾವ್ಯ ಸಂವಾದ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಶಿಕ್ಷಕ ಉಮೇಶ್ ಕೆ.ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯಗಳ ಗಣ್ಯರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ರಾಜಾರಾಮ ಶೆಟ್ಟಿ ಕಾಟುಕುಕ್ಕೆ, ಪ್ರೊ.ಪಿ.ಎನ್.ಮೂಡಿತ್ತಾಯ, ಬೇ.ಸಿ.ಗೋಪಾಲಕೃಷ್ಣ, ಬಾಲಕೃಷ್ಣ ಬೇರಿಕೆ, ಮುಹಮ್ಮದಾಲಿ ಪೆರ್ಲ ಭಾಗವಹಿಸಿದ್ದರು.
ಕವಿಗೋಷ್ಠಿ ಮತ್ತು ಸಂವಾದ ನಡೆಯಿತು. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು. ಸುಭಾಷ್ ಪೆರ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶಾಲಾಕ್ಷ ಪುತ್ರಕಳ, ಮಂಜುಶ್ರೀ ನಲ್ಕ ಕಾರ್ಯಕ್ರಮ ನಿರೂಪಿಸಿದರು. ಆಯಿಷಾ ಎ.ಎ. ಪೆರ್ಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.