ಕಾಸರಗೋಡು: ಮಧೂರು ಮದನಂತೇಶ್ವರ ವಿನಾಯಕ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು, ಏ.5ರಂದು ಮೂಡಪ್ಪ ಸೇವೆ ನಡೆಯಲಿದೆ.
ತಂತ್ರಿ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಗುರುವಾರ ಸಿದ್ಧತೆ ನಡೆದಿದೆ. ದೀಪದ ಬಲಿ, ದರ್ಶನ ಬಲಿ, ಶತರುದ್ರಾಭಿಷೇಕ, 128 ತೆಂಗಿನಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮೂಡಪ್ಪ ಸೇವೆಯ ದ್ರವ್ಯಗಳ ಆಗಮನ, ದ್ರವ್ಯ ಪೂಜೆ ನಡೆದಿವೆ.
ಪ್ರಧಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾಮಕೃಷ್ಣ ಕಾಟುಕುಕ್ಕೆ ಬಳಗದಿಂದ ದಾಸಭಕ್ತಿ ಸಂಕೀರ್ತನೆ, ಬದಿಯಡ್ಕ ವಾಣಿಪ್ರಸಾದ್ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.
ಮೇ 3ರಂದು ಸಂಸ್ಕೃತಿ ಉತ್ಸವ
ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ದತ್ತಿನಿಧಿ ಪ್ರಶಸ್ತಿ ಪ್ರದಾನ, ಸಂಸ್ಕೃತಿ ಉತ್ಸವ ಮೇ 3ರಂದು ಸೀತಾಂಗೋಳಿಯ ಅಲಯನ್ಸ್ ಸಭಾಭವನದಲ್ಲಿ ನಡೆಯಲಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರಸಂಘ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರಗಳ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಂಬಂಧ ಸಂಘಟನಾ ಸಮಿತಿ ರಚನೆ ಸಭೆ ಸೀತಾಂಗೋಳಿಯಲ್ಲಿ ನಡೆಯಿತು. ಉದ್ಯಮಿ ಕೆ.ಕೆ.ಶೆಟ್ಟಿ ಅವರನ್ನು ಸಂಘಟನಾ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಮಿತಿ ಅಧ್ಯಕ್ಷ ರವಿ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮಾಹಿತಿ ನೀಡಿದರು.
ಪ್ರಮುಖರಾದ ಸುಕುಮಾರ್ ಕುದ್ರೆಪ್ಪಾಡಿ, ರಾಮಪ್ಪ ಮಂಜೇಶ್ವರ, ಮಹಾಲಿಂಗ ಕೆ., ಅಪ್ಪಣ್ಣ ಸೀತಾಂಗೋಳಿ, ಕೃಷ್ಣದಾಸ್ ಡಿ., ಮಾನ ಮಾಸ್ಟರ್ ಭಾಗವಹಿಸಿದ್ದರು. ಥಾಮಸ್ ಡಿಸೋಜ ಸ್ವಾಗತಿಸಿದರು. ಗಂಗಧರ ತೆಕ್ಕೆಮೂಲೆ ವಂದಿಸಿದರು.
ಬಂಧನ
ಕಾಸರಗೋಡು: ಮಂಜೇಶ್ವರ ಬಳಿಯ ಮಣ್ಣಂಗುಳಿಯ ತೆಕ್ಕೇಕುನ್ನು ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 130 ಗ್ರಾಂ ಹಾಶಿಶ್ ಸಹಿತ ಮೂಲತಃ ಬಂಟ್ವಾಳ ಮಡುಕುಂಜೆ ನಿವಾಸಿ ಕಲಂದರ್ ಶಾಫಿ (30) ಎಂಬಾತನನ್ನು ಅಬಕಾರಿ ದಳ ಬಂಧಿಸಿದೆ.
ವ್ಯಕ್ತಿ ಸಾವು
ಕಾಸರಗೋಡು: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಅಡೂರು ಕಾಟಿಪ್ಪಾರೆ ಪುದುಚ್ಚೇರಿ ನಿವಾಸಿ ಮಾಧವನ್ ನಾಯರ್ (79) ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.