ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಸಿನಿಮಾ ನಟ ಉಪೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ಈಚೆಗೆ ಭೇಟಿ ನೀಡಿದ್ದ ಅವರಿಗೆ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ದೇಗುಲದ ಚಟುವಟಿಕೆಯನ್ನು ವಿವರಿಸುತ್ತ ಪ್ರಸಾದಕ್ಕೆ ಪ್ಲಾಸ್ಟಿಕ್ ಬಳಸದೆ ಇರುವುದನ್ನು ತಿಳಿಸಿದರು. ಕ್ಯಾಪ್ಸ್ ಫೌಂಡೇಷನ್ ನಡೆಸುತ್ತಿರುವ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಅಭಿಯಾನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಭಕ್ತರಿಗೆ ಬಟ್ಟೆಚೀಲ ವಿತರಿಸಿದರು. ಅಭಿಯಾನವನ್ನು ಬೆಂಬಲಿಸುವುದಾಗಿ ಫೌಂಡೇಷನ್‌ನ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ ಅವರಿಗೆ ತಿಳಿಸಿದರು.
ದೇವಿಯ ದರ್ಶನ ಪಡೆದು ಅನ್ನದಾನಕ್ಕೆ ಕಾಣಿಕೆ ನೀಡಿದರು. ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಅವರು ದೇವರ ಶೇಷವಸ್ತ್ರ ಪ್ರಸಾದ ವಿತರಿಸಿದರು. ಶ್ರೀಕಾಂತ್ ಮತ್ತು ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.