ADVERTISEMENT

ಕೇರಳ- ಕರ್ನಾಟಕ ಗಡಿ ವಿವಾದ ಕಂದಾಯ ಅಧಿಕಾರಿಗಳಿಂದ ಸರ್ವೇ ಆರಂಭ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 10:17 IST
Last Updated 23 ಏಪ್ರಿಲ್ 2020, 10:17 IST
ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಎರಡೂ ರಾಜ್ಯಗಳ ಕಂದಾಯ ಅಧಿಕಾರಿಗಳು ಗಡಿ ಗುರುತಿಸಲು ಗುರುವಾರ ಸರ್ವೇ ಕಾರ್ಯ ಆರಂಭಿಸಿದರು.
ಕೇರಳ-ಕರ್ನಾಟಕ ಗಡಿ ಭಾಗದಲ್ಲಿ ಎರಡೂ ರಾಜ್ಯಗಳ ಕಂದಾಯ ಅಧಿಕಾರಿಗಳು ಗಡಿ ಗುರುತಿಸಲು ಗುರುವಾರ ಸರ್ವೇ ಕಾರ್ಯ ಆರಂಭಿಸಿದರು.   

ಮಂಗಳೂರು: ಕರ್ನಾಟಕ – ಕೇರಳ ಗಡಿ ಪ್ರದೇಶವಾದ ದಕ್ಷಿಣ ‌ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ಬಳಿಕ ಕೇರಳ ಪೊಲೀಸರು ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ತಲಪಾಡಿಯಲ್ಲಿ ಕರ್ನಾಟಕ ಚೆಕ್ ಪೋಸ್ಟ್ ಬಳಿಯೇ ಕೇರಳ ಚೆಕ್ ಪೋಸ್ಟ್ ನಿರ್ಮಾಣ ಮಾಡಿರುವುದು ಇದೀಗ ಗಡಿ ವಿವಾದಕ್ಕೆ ಕಾರಣವಾಗಿದೆ.

ಆಡಳಿತಾತ್ಮಕ ಚರ್ಚೆಯ ಬಳಿಕ ಗುರುವಾರ ಎರಡೂ ಜಿಲ್ಲೆಯ ಕಂದಾಯ ಇಲಾಖೆ ಅಧಿಕಾರಿಗಳಿಂದ ಗಡಿ ಗುರುತು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ ಕೇರಳ ಗಡಿ ಪ್ರದೇಶದಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಇದರೊಂದಿಗೆ ಮಂಗಳೂರು – ಕಾಸರಗೋಡು ಹೆದ್ದಾರಿಯ ಸಂಪರ್ಕ ಸೇರಿದಂತೆ ಕೇರಳದ ರೋಗಿಗಳಿಗೂ ಮಂಗಳೂರು ಪ್ರವೇಶ ತಡೆಯಲಾಗಿತ್ತು. ಬಳಿಕ ರೋಗಿಗಳ ತಪಾಸಣೆ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಆದೇಶದಂತೆ ಷರತ್ತಿನ ಮೇಲೆ ರೋಗಿಗಳಿಗೆ ಅವಕಾಶ ನೀಡಲಾಗಿತ್ತು.

ADVERTISEMENT

ಆದರೆ ಕೆಲದಿನಗಳ ಹಿಂದೆ ಕೋವಿಡ್ ಸೋಂಕಿನಿಂದ ದ.ಕ.ಜಿಲ್ಲೆಯಲ್ಲಿ ಸಾವು ಸಂಭವಿಸಿದ ಬಳಿಕ ಕೇರಳ ಸರ್ಕಾರ ಕರ್ನಾಟಕದ ಎಲ್ಲಾ ಚೆಕ್ ಪೋಸ್ಡ್ ಗಳಲ್ಲಿ ಇಬ್ಬರಂತೆ ಕೇರಳ ಪೊಲೀಸರನ್ನು ನಿಯುಕ್ತಿಗೊಳಿಸಿದೆ. ತಲಪಾಡಿಯಲ್ಲಿ ಈ ಹಿಂದೆ ಮಂಜೇಶ್ವರ ತೂಮಿನಾಡು ಬಳಿ ಇದ್ದ ಚೆಕ್ ಪೋಸ್ಟನ್ನು ತಲಪಾಡಿಯ ಕರ್ನಾಟಕ ಚೆಕ್ ಪೋಸ್ಟ್ ನಿಂದ 100 ಮೀಟರ್ ಅಂತರದಲ್ಲಿ ನಿರ್ಮಿಸಿದ್ದು, ತಲಪಾಡಿ ಗ್ರಾಮ ಪಂಚಾಯಿತಿ ಅಕ್ಷೇಪಣೆ ಗಡಿ ವಿವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.