ADVERTISEMENT

ದ.ಕ: 1,39,571 ಫಲಾನುಭವಿಗಳಿಗೆ ₹ 27.91 ಕೋಟಿ

ಕಿಸಾನ್‌ ಸಮ್ಮಾನ್: ಪ್ರಧಾನಿಯಿಂದ 13ನೇ ಕಂತು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 4:29 IST
Last Updated 28 ಫೆಬ್ರುವರಿ 2023, 4:29 IST
ಕಾರ್ಯಕ್ರಮದ ನೇರಪ್ರಸಾರವನ್ನು ಪ್ರೇಮಾನಂದ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌, ನಳಿನ್‌ ಕುಮಾರ್‌ ಕಟೀಲ್‌, ಸುದರ್ಶನ ಮೂಡುಬಿದಿರೆ, ವಿಜಯ್‌ ಕುಮಾರ್‌, ಪೂರ್ಣಿಮಾ, ಸಂತೋಷ್‌ ಕುಮಾರ್‌ ರೈ ಹಾಗೂ ಇತರರು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ವೀಕ್ಷಿಸಿದರು
ಕಾರ್ಯಕ್ರಮದ ನೇರಪ್ರಸಾರವನ್ನು ಪ್ರೇಮಾನಂದ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌, ನಳಿನ್‌ ಕುಮಾರ್‌ ಕಟೀಲ್‌, ಸುದರ್ಶನ ಮೂಡುಬಿದಿರೆ, ವಿಜಯ್‌ ಕುಮಾರ್‌, ಪೂರ್ಣಿಮಾ, ಸಂತೋಷ್‌ ಕುಮಾರ್‌ ರೈ ಹಾಗೂ ಇತರರು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ವೀಕ್ಷಿಸಿದರು   

ಮಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್‌ ನಿಧಿ ಯೋಜನೆಯ ಫಲಾನುಭವಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 13ನೇ ಕಂತಿನ ಹಣವನ್ನು ಬೆಳಗಾವಿಯಲ್ಲಿ ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.

ರಾಜ್ಯದ 49,96,924 ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ವಂತಿಗೆ ₹ 999.38 ಕೋಟಿಯನ್ನು ಆನ್ ಲೈನ್ ಮೂಲಕ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 1,39,571 ಫಲಾನುಭವಿಗಳಿಗೆ ₹ 27.91 ಕೋಟಿ ಬಿಡುಗಡೆಯಾಗಿದೆ.

ಈ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಮೇಶ್ ಹಾಗೂ ಇತರರು ವೀಕ್ಷಿಸಿದರು. ಜಿಲ್ಲೆಯ ಎಲ್ಲಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲೂ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಆಯೋಜಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.