ADVERTISEMENT

ಕೊಡಂಗೆ: ವೀರ-ವಿಕ್ರಮ ಕಂಬಳ ಸಮಾರೋಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:17 IST
Last Updated 24 ನವೆಂಬರ್ 2025, 4:17 IST
<div class="paragraphs"><p>ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೊಡಂಗೆಯಲ್ಲಿ ಶನಿವಾರ ರಾತ್ರಿ ನಡೆದ ಕಂಬಳದ ಕಾರ್ಯಕ್ರಮದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ<br>ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಬಿ.ರಮಾನಾಥ ರೈ, ರಕ್ಷಿತ್ ಶಿವರಾಂ, ಸಂದೀಪ್ ಶೆಟ್ಟಿ ಪೊಡುಂಬ ಭಾಗವಹಿಸಿದ್ದರು</p></div>

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಕೊಡಂಗೆಯಲ್ಲಿ ಶನಿವಾರ ರಾತ್ರಿ ನಡೆದ ಕಂಬಳದ ಕಾರ್ಯಕ್ರಮದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ
ಸುಮಂತ್ ಕುಮಾರ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಬಿ.ರಮಾನಾಥ ರೈ, ರಕ್ಷಿತ್ ಶಿವರಾಂ, ಸಂದೀಪ್ ಶೆಟ್ಟಿ ಪೊಡುಂಬ ಭಾಗವಹಿಸಿದ್ದರು

   

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಶನಿವಾರ ಆರಂಭಗೊಂಡಿದ್ದ 3ನೇ ವರ್ಷದ ಕಂಬಳ ಭಾನುವಾರ ಸಮಾರೋಪಗೊಂಡಿತು.

132 ಜೊತೆ ಕೋಣಗಳು ಭಾಗವಹಿಸಿದ್ದು, ಕನೆಹಲಗೆಯಲ್ಲಿ 3 ಜೊತೆ, ಅಡ್ಡಹಲಗೆ 7, ಹಗ್ಗ ಹಿರಿಯ 12, ನೇಗಿಲು ಹಿರಿಯ 28, ಹಗ್ಗ ಕಿರಿಯ 20, ನೇಗಿಲು ಕಿರಿಯ 62 ಜೊತೆ ಕೋಣಗಳು ಭಾಗವಹಿಸಿದ್ದವು.

ADVERTISEMENT

ಫಲಿತಾಂಶ: ಅಡ್ಡ ಹಲಗೆ– ಪ್ರಥಮ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೋಳಿಯಾರ್ (12.38) ಹಲಗೆ ಮೆಟ್ಟಿದವರು: ಬೈಂದೂರು ಮಹೇಶ್ ಪೂಜಾರಿ, ದ್ವಿತೀಯ: ಇರುವೈಲು ದೊಡ್ಡಗುತ್ತು ಜಗದೀಶ್ ಎಂ.ಶೆಟ್ಟಿ (12.56) ಹಲಗೆ ಮೆಟ್ಟಿದವರು: ರಾಂಪಹಿತ್ಲು ರಾಘವೇಂದ್ರ ಪೂಜಾರಿ, ಹಗ್ಗ ಹಿರಿಯ: ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್.ಕೋಟ್ಯಾನ್ (11.80) ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ.ಶೆಟ್ಟಿ ‘ಎ’ (12.07) ಓಡಿಸಿದವರು: ಕಾವೂರು ದೋಟ ಸುದರ್ಶನ್, ಹಗ್ಗ ಕಿರಿಯ: ಪ್ರಥಮ: ಲೊರೆಟ್ಟೊ ಮಹಲ್ ತೋಟ ಆನ್ಯ ಅನಿಲ್ ಮಿನೇಜಸ್ (11.72) ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ, ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ‘ಎ’ (12.78) ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ.

ನೇಗಿಲು ಹಿರಿಯ: ಪ್ರಥಮ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (12.02) ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ, ದ್ವಿತೀಯ: ಶ್ರೀ ಮಹಮ್ಮಾಯಿ ಕಲ್ಲೇರಿ ಪಂಜಿಕುಡೆಲು ಗುತ್ತು ನಾರಾಯಣ ಪೂಜಾರಿ (12.06) ಓಡಿಸಿದವರು: ಮಂಗಲ್ಪಾಡಿ ರಕ್ಷಿತ್, ನೇಗಿಲು ಕಿರಿಯ: ಪ್ರಥಮ: ಮುನಿಯಾಲು ಉದಯ ಕುಮಾರ್ ಶೆಟ್ಟಿ ‘ಎ’ (11.52) ಓಡಿಸಿದವರು: ಬಾರಾಡಿ ನತೀಶ್ ಸಪಳಿಗ, ದ್ವಿತೀಯ: ಉಳೆಪಾಡಿ ಪುಲ್ಲೋಡಿಬೀಡು ಉದಯ್ ಶೆಟ್ಟಿ ‘ಎ’ (11.83) ಓಡಿಸಿದವರು: ಸೂರಾಲ್ ಪ್ರದೀಪ್ ನಾಯ್ಕ್.

ನೇಗಿಲು ಹಿರಿಯ ವಿಭಾಗದ ಫೈನಲ್‌ನಲ್ಲಿ ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ ಅವರ ಕೋಣಗಳು ಮತ್ತು ಶ್ರೀ ಮಹಮ್ಮಾಯಿ ಕಲ್ಲೇರಿ ಪಂಜಿಕುಡೆಲು ಗುತ್ತು ನಾರಾಯಣ ಪೂಜಾರಿ ಅವರ ಕೋಣಗಳ ಫಲಿತಾಂಶ ಟೈ ಆಗಿತ್ತು. ಮತ್ತೊಮ್ಮೆ ಓಡಿಸಿದಾಗ ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ ಅವರ ಕೋಣಗಳು 0.04 ಸೆಕೆಂಡ್ ಅಂತರದಲ್ಲಿ ಪ್ರಥಮ ಸ್ಥಾನ ಗೆದ್ದುಕೊಂಡವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.