ADVERTISEMENT

ಕೊಕ್ಕೊ: ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ 

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 6:10 IST
Last Updated 11 ಏಪ್ರಿಲ್ 2024, 6:10 IST
ಕ್ಯಾಲಿಕಟ್ ವಿವಿಯಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಅಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳು
ಕ್ಯಾಲಿಕಟ್ ವಿವಿಯಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಮೂಡುಬಿದಿರೆಯ ಅಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳು   

ಮೂಡುಬಿದಿರೆ: ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಜ.29ರಿಂದ 31ರ ವರೆಗೆ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಪುರುಷರ ಕೊಕ್ಕೊ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವು ದ್ವಿತೀಯ ರನ್ನರ್ ಅಪ್ ಆಗಿದ್ದು, ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ 15 ಕ್ರೀಡಾಪಟುಗಳ ಪೈಕಿ 13 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು.

ಈ ಟೂರ್ನಿಯಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾಲಯ ಪ್ರಥಮ, ಔರಂಗಬಾದ್‌ನ ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠ್ವಾಡ ವಿಶ್ವವಿದ್ಯಾಲಯ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.

ಚೆನ್ನೈನಲ್ಲಿ ಜ.26ರಿಂದ 30ರವರೆಗೆ ಯುವ ಖೇಲೋ ಇಂಡಿಯ ಕೊಕ್ಕೊ ಟೂರ್ನಿಯಲ್ಲಿ ಯುವಕರ ಹಾಗೂ
ಯುವತಿಯರ ವಿಭಾಗದ ರಾಜ್ಯ ತಂಡವನ್ನು ಆಳ್ವಾಸ್ ಕಾಲೇಜಿನ ತಲಾ ಇಬ್ಬರು ಪ್ರತಿನಿಧಿಸಿದ್ದಾರೆ.

ADVERTISEMENT

ಯುವಕರ ತಂಡವನ್ನು ಆಳ್ವಾಸ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಸಂಗೀತ್ ಗೌಡ, ದ್ವಿತೀಯ ಪಿಯು ವಿದ್ಯಾರ್ಥಿ ರಮೇಶ್ ಪ್ರತಿನಿಧಿಸಿದ್ದು, ಕರ್ನಾಟಕ ತಂಡವು ತೃತೀಯ ಸ್ಥಾನ ಪಡೆದಿದೆ.

ಯುವತಿಯರ ತಂಡದಲ್ಲಿ ಆಳ್ವಾಸ್ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿ ಹಿಮಾನಿ, ಪ್ರಥಮ ಪಿಯು ವಿದ್ಯಾರ್ಥಿನಿ ಅಪೂರ್ವ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.