
ಬಂಟ್ವಾಳ: ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನರಲ್ಲಿ ಶಿಸ್ತು ಮತ್ತು ಆರೋಗ್ಯದ ಜೊತೆಗೆ ಸಂಘಟನೆ ವೃದ್ಧಿಗೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಹೇಳಿದರು.
ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿಲ್ಲವ ಮಹಿಳಾ ಸಮಿತಿ ಮತ್ತು ಯುವವಾಹಿನಿ ಘಟಕದ ಸಹಭಾಗಿತ್ವದಲ್ಲಿ ಭಂಡಾರಿಬೆಟ್ಟು ಎಸ್.ವಿ.ಎಸ್ ಮೈದಾನದಲ್ಲಿ ಭಾನುವಾರ ನಡೆದ 'ಕೋಟಿ- ಚೆನ್ನಯ' ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕ್ರೀಡೋತ್ಸವ ಸಂಘಟನೆಗೆ ಶಕ್ತಿ ನೀಡಿದೆ ಎಂದರು.
ಬಂಟ್ವಾಳ ಡಿವೈಎಸ್‌ಪಿ ವಿಜಯ ಪ್ರಸಾದ್ ಗೌರವ ರಕ್ಷೆ ಸ್ವೀಕರಿಸಿ, ಧ್ವಜಾರೋಹಣ ನೆರವೇರಿಸಿದರು.
ಗುರುಧರ್ಮ ಪ್ರಚಾರಸಭಾ ಘಟಕದ ಸಂಚಾಲಕ ಗೋಪಿ ಕೃಷ್ಣಪ್ಪ ಕ್ರೀಡಾ ಜ್ಯೋತಿ ಹಸ್ತಾಂತರಿಸಿದರು.
ಬೆಂಗಳೂರು ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಾಂತಾರಾಮ ಕುಂದರ್, ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಸಂಚಲನಾ ಸಮಿತಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ ಶುಭ ಹಾರೈಸಿದರು.
ಪ್ರಮುಖರಾದ ನವೀನ್ ಚಂದ್ರ ಡಿ.ಸುವರ್ಣ, ಜೈರಾಜ್ ಎಚ್.ಸೋಮಸುಂದರಂ, ಪದ್ಮರಾಜ್ ಆರ್.ಪೂಜಾರಿ, ಸತೀಶ್ ಕುಂಪಲ, ಅಶೋಕ್ ಕುಮಾರ್ ಪಡ್ಪು, ಲೀಲಾಕ್ಷ ಬಿ.ಕರ್ಕೇರಾ, ಎ.ರುಕ್ಮಯ ಪೂಜಾರಿ, ಸಂಜೀವ ಪೂಜಾರಿ ಮೆಲ್ಕಾರ್, ಪ್ರಕಾಶ್ ಅಂಚನ್, ಗಾಯತ್ರಿ ಎಂ. ಶಿವಕುಮಾರ್, ಜಗನ್ನಾಥ ಬಂಗೇರ ನಿರ್ಮಾಲ್, ನಿತೇಶ್, ಸುರೇಶ್ ಕರ್ಕೇರ, ಲೋಕೇಶ್ ಸುವರ್ಣ ಕಲ್ಲಡ್ಕ, ರಾಮಪ್ಪ ಪೂಜಾರಿ, ಜಯಪ್ರಕಾಶ್ ಜೆ.ಎಸ್., ಶ್ರೀನಿವಾಸ ಪೂಜಾರಿ ಮೆಲ್ಕಾರ್, ಸುನಿಲ್ ಕುಂದರ್, ಆನಂದ ಸಾಲ್ಯಾನ್, ಪ್ರಶಾಂತ್ ಕೋಟ್ಯಾನ್, ಸುಂದರ ಪೂಜಾರಿ ಬೋಳಂಗಡಿ, ಹರೀಶ್ ಕೋಟ್ಯಾನ್ ಕುದನೆ, ನಾಗೇಶ್ ಪೂಜಾರಿ ನೈಬೇಲು, ಭವಾನಿ ಕೆ. ಭಾಗವಹಿಸಿದ್ದರು.
ಕ್ರೀಡೋತ್ಸವ ಸಮಿತಿ ಸಂಚಾಲಕ ಬೇಬಿ ಕುಂದರ್ ಸ್ವಾಗತಿಸಿ, ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಮತ್ತು ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.