ನಗ್ಮಾ ಮಹಮ್ಮದ್ ಮಾಲಿಕ್
ಚಿತ್ರ ಕೃಪೆ: ಎಕ್ಸ್
ಕಾಸರಗೋಡು: ಜಪಾನ್‌ನಲ್ಲಿ ಭಾರತೀಯ ರಾಯಭಾರಿಯನ್ನಾಗಿ ಕಾಸರಗೋಡು ಮೂಲದ ನಗ್ಮಾ ಮಹಮ್ಮದ್ ಮಾಲಿಕ್ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿದೆ.
ನಗರದ ಕೋಟೆರಸ್ತೆಯ ಮೂಲನಿವಾಸಿಗಳಾದ, ಈಗ ನವದೆಹಲಿಯಲ್ಲಿ ನೆಲೆಸಿರುವ ಮಹಮ್ಮದ್ ಹಬೀಬುಲ್ಲ-ಸುಲುಬಾನು ದಂಪತಿ ಪುತ್ರಿ ನಗ್ಮಾ. ಅವರು ನವದೆಹಲಿಯಲ್ಲಿ ಜನಿಸಿ ಅಲ್ಲಿನ ಸೇಂಟ್ ಸ್ಟಿಫನ್ ಕಾಲೇಜು ಮತ್ತು ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ಇಂಗ್ಲಿಷ್ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಹಿಂದೆ ಪೋಲೇಂಡ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದರು.
ಇವರು ಸಾಹಿತಿ ಸಾರಾ ಅಬೂಬಕ್ಕರ್ ಅವರ ಸಹೋದರಿಯ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.