ADVERTISEMENT

ಕಟ್ಟಡದ ಮೇಲೆ ಕುಸಿದ ಮಣ್ಣು: 5 ಸಾವಿರ ಕೋಳಿಗಳ ಸಾವು

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 12:59 IST
Last Updated 31 ಜುಲೈ 2024, 12:59 IST
ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮದ ಮಠ ಎಂಬಲ್ಲಿ ಕೋಳಿ ಸಾಕಾಣಿಕೆ ಕಟ್ಟಡ ಮೇಲೆ ಧರೆ ಕುಸಿದು 5 ಸಾವಿರಕ್ಕೂ ಹೆಚ್ಚು  ಕೋಳಿಗಳು ಸತ್ತಿವೆ. ಕಟ್ಟಡಕ್ಕೂ ಹಾನಿಯಾಗಿದೆ
ಪುತ್ತೂರು ತಾಲ್ಲೂಕಿನ ಕೆದಂಬಾಡಿ ಗ್ರಾಮದ ಮಠ ಎಂಬಲ್ಲಿ ಕೋಳಿ ಸಾಕಾಣಿಕೆ ಕಟ್ಟಡ ಮೇಲೆ ಧರೆ ಕುಸಿದು 5 ಸಾವಿರಕ್ಕೂ ಹೆಚ್ಚು  ಕೋಳಿಗಳು ಸತ್ತಿವೆ. ಕಟ್ಟಡಕ್ಕೂ ಹಾನಿಯಾಗಿದೆ   

ಪುತ್ತೂರು: ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಯ ಆವರಣಗೋಡೆ ಕುಸಿದು, ಧರೆ ಕುಸಿದು ಅಪಾರ ಹಾನಿ ಸಂಭವಿಸಿದೆ. ಸಂಪ್ಯದ ಮೂಲೆ ಎಂಬಲ್ಲಿ ಅಬೂಬಕ್ಕರ್ ಸಿದ್ದೀಕ್ ಎಂಬುವರ ಮನೆಯ ಆವರಣಗೋಡೆ ಕುಸಿದಿದೆ.

ಬಾಬು ನಾಯ್ಕ ಎಂಬುವರ ಮನೆಯ ಆವರಣಗೋಡೆ ಕುಸಿದಿದೆ. ಕೊಲ್ಯದಲ್ಲಿ ಧರೆ ಕುಸಿದಿದೆ. ಆರ್ಯಾಪು ಗ್ರಾಮದ ನೆಕ್ಕರೆ ಎಂಬಲ್ಲಿ ಕಾಲು ಸಂಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ಸಂಪರ್ಕ ಕಡಿತಗೊಂಡಿದೆ. 

ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯ ಮಚ್ಚಿಮಲೆ ಎಂಬಲ್ಲಿ ರಸ್ತೆ ಬದಿಯ ಮಣ್ಣು ಕುಸಿದಿದೆ. ಕೆದಂಬಾಡಿ ಗ್ರಾಮದ ಮಠ ಎಂಬಲ್ಲಿ ಚಂದ್ರಾವತಿ ರೈ ಎಂಬುವರಿಗೆ ಸೇರಿದ ಕೋಳಿ ಸಾಕಾಣಿಕೆ ಕಟ್ಟಡದ ಮೇಲೆ ಮಣ್ಣು ಕುಸಿದು 5 ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿವೆ. ಅಂದಾಜು ₹5 ಲಕ್ಷದಷ್ಟು ನಷ್ಟ ಅಂದಾಜು ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.