ADVERTISEMENT

ಮಂಗಳೂರು| ಮದ್ಯ ವ್ಯಸನಗಳಿಗೆ ‘ಪುನರ್ಜನ್ಮ’: ಕುಟುಂಬ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 5:00 IST
Last Updated 27 ಫೆಬ್ರುವರಿ 2023, 5:00 IST
ಮೂಡುಬಿದಿರೆಯ ಮಿಜಾರಿನಲ್ಲಿ ನಡೆದ ಆಳ್ವಾಸ್ ಪುನರ್ಜನ್ಮದ ವಾರ್ಷಿಕೋತ್ಸವದಲ್ಲಿ ಡಾ.ಕುಮಾರ್ ಅವರನ್ನು ಆಳ್ವಾಸ್ ಹೆಲ್ತ್ ಸೆಂಟರ್‌ನ ಡಾ.ವಿನಯ್ ಆಳ್ವ ಗೌರವಿಸಿದರು
ಮೂಡುಬಿದಿರೆಯ ಮಿಜಾರಿನಲ್ಲಿ ನಡೆದ ಆಳ್ವಾಸ್ ಪುನರ್ಜನ್ಮದ ವಾರ್ಷಿಕೋತ್ಸವದಲ್ಲಿ ಡಾ.ಕುಮಾರ್ ಅವರನ್ನು ಆಳ್ವಾಸ್ ಹೆಲ್ತ್ ಸೆಂಟರ್‌ನ ಡಾ.ವಿನಯ್ ಆಳ್ವ ಗೌರವಿಸಿದರು   

ಮಂಗಳೂರು: ಮದ್ಯ ವ್ಯಸನಕ್ಕೆ ಒಳಗಾಗಿ ಬದುಕೇ ಮುಗೀತು ಎನ್ನುವ ವರಿಗೆ ‘ಪುನರ್ಜನ್ಮ’ ಹೊಸ ಬದುಕು ಕಟ್ಟಿಕೊಡಲು ಹಾಗೂ ಸಮಾಜದ ಮುಖ್ಯವಾಹಿನಿಗೆ ತಲುಪಲು ಸಹಾಯ ಹಸ್ತ ನೀಡುತ್ತಿದೆ ಎಂದು ಜಿಲ್ಲಾ ಪಂಚಾ ಯಿತಿ ಸಿಇಒ ಡಾ.ಕುಮಾರ್ ಹೇಳಿದರು.

ಮಿಜಾರಿನ ಆಳ್ವಾಸ್ ಹೊಮಿಯೋಪತಿ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಆಳ್ವಾಸ್ ಪುನರ್ಜನ್ಮ’ದ 3ನೇ ವರ್ಷದ ವಾರ್ಷಿಕೋತ್ಸವ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಹುಟ್ಟುತ್ತಾ ಯಾರೂ ಕೆಟ್ಟವರಾಗಿರುವುದಿಲ್ಲ. ಆದರೆ, ಬೆಳೆಯುತ್ತಾ ನಮಗೆ ಲಭಿಸುವ ಪರಿಸರದ ವಾತಾವರಣ ಹಾಗೂ ಸಹವಾಸ ನಮ್ಮನ್ನು ಬದಲಾಯಿಸುತ್ತದೆ. ಮನುಷ್ಯನ ಜೀವನದಲ್ಲಿ ತಪ್ಪು ಸಹಜ. ತಪ್ಪುಗಳನ್ನು ತಿದ್ದಿಕೊಂಡು ಜೀವನದಲ್ಲಿ ಸರಿ ದಾರಿಯತ್ತ ಮುನ್ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್ ನಿರ್ದೇಶಕ ಡಾ.ವಿನಯ್ ಆಳ್ವ ಮಾತನಾಡಿ, ಅಮಲು ಪದಾರ್ಥ ಮನುಷ್ಯ ಆರೋಗ್ಯಕ್ಕೆ ಅಪಾಯಕಾರಿ. ಮನುಷ್ಯ ಅದರಿಂದ ದೂರವಿರಬೇಕು ಎಂದರು.

ADVERTISEMENT

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ‘ಬದುಕಿಗೆ ಬದಲಾವಣೆ ಅವಶ್ಯಕ. ಬದುಕು ಬದಲಾಗಬೇಕಾದರೆ ಛಲ, ಆತ್ಮವಿಶ್ವಾಸವನ್ನು ಬಲಪಡಿಕೊಳ್ಳಬೇಕು’ ಎಂದರು.

ಉಡುಪಿಯ ಡಾ.ಪಿ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ ಭಂಡಾರಿ ಮಾತನಾಡಿ ‘ಕುಡಿತ ಎಂಬುವುದು ಒಂದು ರೀತಿಯ ಮನೋರೋಗ. ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ’ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿದರು, ವಿದ್ಯಾರ್ಥಿನಿ ಪವಿತ್ರಾ ಕುಂದಾಪುರ ನಿರೂಪಿಸಿದರು. ಆಳ್ವಾಸ್ ಪುನರ್ಜನ್ಮದ ಆಪ್ತ ಸಮಾಲೋಚಕ ಲೋಹಿತ್ ಕೆ. ವಂದಿಸಿದರು. ಆಳ್ವಾಸ್ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಡಾ.ಮಧುಮಾಲ ಉಪಸ್ಥಿತರಿದ್ದರು.

ಆಳ್ವಾಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ಕುರಿತಾದ ಜಾಗೃತಿ ಮೂಡಿಸುವ ನೃತ್ಯ ಹಾಗೂ ಉಪನ್ಯಾಸಕ ಸುಧೀಂದ್ರ ನಿರ್ದೇಶನದಲ್ಲಿ ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ರೂಪಕ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.