ADVERTISEMENT

ಮಂಗಳೂರು ವಿಮಾನನಿಲ್ದಾಣ: ಒಂದೇ ದಿನ 7,710 ಜನರ ಪ್ರಯಾಣ

ಬಜಪೆ: ಪ್ರಯಾಣಿಕರ ನಿರ್ವಹಣೆಯಲ್ಲಿ ಹೊಸ ದಾಖಲೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2025, 0:28 IST
Last Updated 14 ಜನವರಿ 2025, 0:28 IST
ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ
ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ   

ಮಂಗಳೂರು: ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವನ್ನು ಭಾನುವಾರ (ಜ.12) ಒಟ್ಟು 7,710  ಪ್ರಯಾಣಿಕರು ಬಳಸಿದ್ದು, ಇದು ಹೊಸ ದಾಖಲೆಯಾಗಿದೆ. ಈ ವಿಮಾನ ನಿಲ್ದಾಣವು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಬಳಿಕ ಒಂದೇ ದಿನದಲ್ಲಿ ನಿರ್ವಹಿಸಿದ ಪ್ರಯಾಣಿಕರ ಗರಿಷ್ಠ ಸಂಖ್ಯೆ ಇದು.

ಭಾನುವಾರ 24 ವಿಮಾನಗಳು ಇಲ್ಲಿ ಇಳಿದಿದ್ದು, 25 ವಿಮಾನಗಳು ಇಲ್ಲಿಂದ ಪ್ರಯಾಣ ಬೆಳೆಸಿವೆ. ಅವುಗಳಲ್ಲಿ 7,613 ಹಿರಿಯರು, 97 ಮಕ್ಕಳು  ಪ್ರಯಾಣಿಸಿದ್ದಾರೆ. ವಿಮಾನನಿಲ್ದಾಣದಲ್ಲಿ ಶನಿವಾರವೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇತ್ತು. ಅಂದು 48 ವಿಮಾನಗಳು ಹಾರಾಟ ನಡೆಸಿದ್ದು, ಒಟ್ಟು 7,538 ಪ್ರಯಾಣಿಕರು ಅವುಗಳಲ್ಲಿ ಪ್ರಯಾಣಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT