ADVERTISEMENT

ಮಂಗಳೂರು ಮ್ಯಾರಥಾನ್: ಬದಲಿ ಮಾರ್ಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 5:58 IST
Last Updated 8 ನವೆಂಬರ್ 2025, 5:58 IST
ಸುಧೀರ್ ಕುಮಾರ್ ರೆಡ್ಡಿ
ಸುಧೀರ್ ಕುಮಾರ್ ರೆಡ್ಡಿ   

ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನ.9ರಂದು ಆಯೋಜಿಸಿರುವ ಮಂಗಳೂರು ಮ್ಯಾರಥಾನ್ ಕಾರ್ಯಕ್ರಮದಲ್ಲಿ 6,000ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಸಂಚಾರಕ್ಕೆ ತೊಡಕಾಗುವ ಕಾರಣಕ್ಕೆ ಸಾರ್ವಜನಿಕರು ಬದಲಿ ಮಾರ್ಗ ಬಳಸಬಹುದು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಬೆಳಿಗ್ಗೆ 4 ಗಂಟೆಯಿಂದ 10 ಗಂಟೆಯವರೆಗೆ ಮ್ಯಾರಥಾನ್ ನಡೆಯಲಿದೆ. ಮಂಗಳಾ ಕ್ರೀಡಾಂಗಣದಿಂದ ಹೊರಟು ನಾರಾಯಣಗುರು ವೃತ್ತ, ಕೊಟ್ಟಾರ ಚೌಕಿ, ಕುದುರೆಮುಖ ಜಂಕ್ಷನ್, ತಣ್ಣೀರುಬಾವಿ ಫೆರಿ, ಎನ್‌ಎಂಪಿಎ ಸರ್ವಿಸ್ ರಸ್ತೆ, ಡಿಕ್ಸಿ ಕ್ರಾಸ್, ಪಣಂಬೂರು ಬೀಚ್, ಪಣಂಬೂರು ಜಂಕ್ಷನ್‌ನಿಂದ ವಾಪಸ್ ಕೊಟ್ಟಾರಚೌಕಿ, ನಾರಾಯಣಗುರು ವೃತ್ತದ ಮಾರ್ಗವಾಗಿ ಮಂಗಳಾ ಕ್ರೀಡಾಂಗಣದಲ್ಲಿ ಓಟ ಕೊನೆಗೊಳ್ಳಲಿದೆ.

ಪಿ.ವಿ.ಎಸ್ ಕಡೆಯಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಸಂಚರಿಸುವ ವಾಹನಗಳು ಲಾಲ್‌ಬಾಗ್, ಕೆ.ಎಸ್.ಆರ್.ಟಿ.ಸಿ., ಕುಂಟಿಕಾನ ಮೂಲಕ ಸಂಚರಿಸಬಹುದು. ಕುದ್ರೋಳಿ- ಮಣ್ಣಗುಡ್ಡ ಮತ್ತು ಉರ್ವ ಮಾರ್ಕೆಟ್‌ನಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್) ಕಡೆಗೆ ಸಂಚರಿಸುವ ವಾಹನಗಳು ಮಣ್ಣಗುಡ್ಡ - ಬಲ್ಲಾಳ್‌ಬಾಗ್, ನೆಹರೂ ಅವಿನ್ಯೂ ರಸ್ತೆ, ಲಾಲ್‌ಬಾಗ್, ಕೆ.ಎಸ್.ಆರ್.ಟಿ.ಸಿ., ಕುಂಟಿಕಾನ ಮೂಲಕ ಸಂಚರಿಸಬಹುದು.

ADVERTISEMENT

ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಬಿಜೈ ಕಾಪಿಕಾಡ್ ಕಡೆಯಿಂದ ಕುಂಟಿಕಾನ ಮೂಲಕ, ಆಶೋಕ ನಗರ, ಶೇಡಿಗುರಿ, ದಂಬೇಲ್, ಸುಲ್ತಾನ್ ಬತ್ತೇರಿ ಕಡೆಯಿಂದ ಬರುವ ವಾಹನಗಳು ಉರ್ವ ಮಾರ್ಕೆಟ್, ಮಣ್ಣಗುಡ್ಡ ಮುಖಾಂತರ ಸಂಚರಿಸಬಹುದು. ಕೊಟ್ಟಾರಚೌಕಿ ಜಂಕ್ಷನ್ ಕಡೆಯಿಂದ ಉಡುಪಿ ಕಡೆಗೆ ಸಂಚರಿಸುವ ವಾಹನಗಳು ಕೋಡಿಕಲ್ ಕ್ರಾಸ್‌ವರೆಗೆ ಉಡುಪಿ-ಮಂಗಳೂರು ರಸ್ತೆಯಲ್ಲಿ ದ್ವಿಮುಖವಾಗಿ ಸಂಚರಿಸಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.