ADVERTISEMENT

ಮಾರ್ಚ್‌ನಿಂದ ಮಂಗಳೂರು– ಮಸ್ಕತ್ ವಿಮಾನ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:45 IST
Last Updated 14 ಡಿಸೆಂಬರ್ 2025, 7:45 IST
   

ಮಂಗಳೂರು: ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಮಾರ್ಚ್ 2026ರಿಂದ ಮಂಗಳೂರಿನಿಂದ ಮಸ್ಕತ್‌ಗೆ ಪುನಃ ವಿಮಾನಸೇವೆ ಆರಂಭಿಸಲಿದೆ.

ಮಾರ್ಚ್‌ 1ರಿಂದ ಪ್ರತಿ ಭಾನುವಾರ ಮತ್ತು ಮಂಗಳವಾರ ಈ ವಿಮಾನ ಕಾರ್ಯಾಚರಿಸಲಿದೆ. ಮಾ.3, ಮಾ. 8 ಮತ್ತು 10, ಮಾ.15 ಮತ್ತು 17 ಹೀಗೆ ವೇಳಾಪಟ್ಟಿ ಮುಂದುವರಿಯಲಿದೆ. ಪ್ರಯಾಣವು 3.25 ನಿಮಿಷ ಅವಧಿಯದ್ದಾಗಿರಲಿದೆ.

2025ರ ಬೇಸಿಗೆ ವೇಳಾಪಟ್ಟಿಯಲ್ಲಿ ಜುಲೈ 14ರಂದು ಮಸ್ಕತ್‌ಗೆ ಕಾರ್ಯಾಚರಣೆ ನಡೆಸಲಾಗಿತ್ತು. ವಾರಕ್ಕೆ ನಾಲ್ಕು ಬಾರಿ ಹಾರಾಟ ನಡೆಸಿ, ನಂತರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ADVERTISEMENT

ಬೇಸಿಗೆ ವೇಳಾಪಟ್ಟಿಯು ಮಾರ್ಚ್‌ 29ರಂದು ಪ್ರಾರಂಭವಾಗಲಿದ್ದು, ಮಂಗಳೂರಿನಿಂದ ಹೊರಡುವ ವಿಮಾನಗಳ ಸಮಯ ಮತ್ತು ವೇಳಾಪಟ್ಟಿ ಬದಲಾಗುತ್ತವೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.