ರೈಲ್ವೆ ಹಳಿ ಮೇಲೆ ಕುಸಿದಿರುವ ದೃಶ್ಯ (ಸಾಂದರ್ಭಿಕ ಚಿತ್ರ)
ಮಂಗಳೂರು: ಭಾರಿ ಮಳೆಯಿಂದಾಗಿ ನಗರದ ಹೊರವಲಯದ ಪಡೀಲ್–ಜೋಕಟ್ಟೆ ನಡುವೆ ರೈಲ್ವೆ ಹಳಿಗೆ ಮಣ್ಣು ಜರಿದು ಬಿದ್ದಿದೆ.
ಇದರ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಹೊರಡುವ ಹಾಗೂ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ತಡವಾಗಿ ಸಂಚಲಿಸಲಿವೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.
ನೇತ್ರಾವತಿ ಎಕ್ಸ್‌ಪ್ರೆಸ್ (16345) ರೈಲು ತಡವಾಗಿ ಸಂಚರಿಸುತ್ತಿದೆ. ಯಾವುದಾದರೂ ತುರ್ತು ನೆರವಿನ ಅಗತ್ಯ ಇದ್ದಲ್ಲ ಎಕ್ಸ್ ಮಾಧ್ಯಮದ (@RailwaySeva) ಮೂಲಕ ನೆರವು ಕೋರಬಹುದು ಅಥವಾ 139 ಕರೆ ಮಾಡಬಹುದು. ಪ್ರಯಾಣಕ್ಕೆ ಮುನ್ನ ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆಯನ್ಬು (NTES) ಗಮನಿಸುವಂತೆ ರೈಲ್ವೆ ಇಲಾಖೆ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.