ಚುನಾವಣೆ
(ಸಾಂದರ್ಭಿಕ ಚಿತ್ರ)
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳ 30 ವಾರ್ಡ್‌ಗಳ 31 ಸದಸ್ಯರ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದಿದ್ದು ಫಲಿತಾಂಶ ಪ್ರಕಟವಾಗಿದೆ.
ಗ್ರಾಮ ಪಂಚಾಯಿತಿ ಉಪ ಚುನಾವಣೆ ನಡೆದ 19 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಮುಖಂಡರು ಹೇಳಿಕೊಂಡಿದ್ದಾರೆ.
ಉಪ ಚುನಾವಣೆಯ ಫಲಿತಾಂಶದಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ. ಈ ಹಿಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದ ವಾರ್ಡ್‌ಗಳಲ್ಲಿ ಉಪಚುನಾವಣೆಯಲ್ಲು ನಮ್ಮ ಪಕ್ಷದವರೇ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿಕೊಂಡಿದ್ದಾರೆ.
ಸುಳ್ಯ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿಗಳಲ್ಲಿ (ಕೊಲ್ಲಮೊಗ್ರು, ನೆಲ್ಲೂರು ಕೆಮ್ರಾಜೆ ಹಾಗೂ ಹರಿಹರಪಲ್ಲತಡ್ಕ) ತೆರವಾಗಿದ್ದ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.
ಮಂಗಳೂರು : 4 ಕಾಂಗ್ರೆಸ್, 2 ಬಿಜೆಪಿ ಬೆಂಬಲಿತರ ಆಯ್ಕೆ:
ಮಂಗಳೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ಆರು ಸದಸ್ಯರ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ನಾಲ್ಕು ಕಡೆ ಕಾಂಗ್ರೆಸ್ ಬೆಂಬಲಿತ ಹಾಗೂ ಎರಡು ಕಡೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಜೋಕಟ್ಟೆ ಗ್ರಾಮ ಪಂಚಾಯಿತಿಯ ತೋಕೂರು ಗ್ರಾಮದ 4ನೇ ವಾರ್ಡಿನಲ್ಲಿ ಹಸನ್ ಫಯಾಜ್ (ಹಿಂದುಳಿದ ವರ್ಗ.ಎ), ಗಂಜಿಮಠ ಗ್ರಾಮ ಪಂಚಾಯಿತಿಯ ಮೊಗರು 1ನೇ ವಾರ್ಡ್‌ನಲ್ಲಿ ಸುನಿಲ್ (ಸಾಮಾನ್ಯ), ನೀರುಮಾರ್ಗ ಗ್ರಾಮ ಪಂಚಾಯಿತಿಯ ಬೊಂಡಂತಿಲ 2ನೇ ವಾರ್ಡ್‌ನಲ್ಲಿ ಅಶ್ರಫ್ (ಹಿ'.ವರ್ಗ ಎ), ಅಡ್ಯಾರು ಗ್ರಾಮ ಪಂಚಾಯಿತಿಯ ಐದನೇ ವಾರ್ಡ್‌ನಲ್ಲಿ ಗೌರವ ಡಿ ಶೆಟ್ಟಿ (ಸಾಮಾನ್ಯ) ಗೆದ್ದಿದ್ದಾರೆ. ಇವರು ನಾಲ್ವರೂ ಕಾಂಗ್ರೆಸ ಬೆಂಬಲಿತ ಅಭ್ಯರ್ಥಿಗಳು.
ಮೂಡುಶೆಡ್ಡೆ ಗ್ರಾಮ ಪಂಚಾಯಿತಿಯ ಆರನೇ ವಾರ್ಡ್‌ನಲ್ಲಿ ಶಶಿಕಲಾ ಬಿ (ಸಾಮಾನ್ಯ ಮಹಿಳೆ), ಮೂಡುಶೆಡ್ಡೆ 7ನೇ ವಾರ್ಡ್‌ನಲ್ಲಿ ವಿಜಯಲಕ್ಷ್ಮೀ (ಪರಿಶಿಷ್ಟ ಪಂಗಡ) ಗೆಲುವು ಸಾಧಿಸಿದ್ದು, ಇವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.