
ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಮಂಗಳೂರು: ಆನ್‌ಲೈನ್ ಹೂಡಿಕೆಗೆ ಸಂಬಂಧಿಸಿದ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿ ₹ 19.06 ಲಕ್ಷ ಹಣ ವರ್ಗಾಯಿಸಿ ವಂಚನೆಗೆ ಒಳಗಾದ ಸಂತ್ರಸ್ತ ಮಹಿಳೆಯೊಬ್ಬರು ದೂರು ನೀಡಿದ್ದು, ಉರ್ವ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನನ್ನ ಮೊಬೈಲ್‌ಗೆ ಹೂಡಿಕೆ ಕುರಿತ ಜಾಹೀರಾತು ಬಂದಿತ್ತು. ಬಳಿಕ ಗೂಗಲ್‌ನಲ್ಲಿ ಸಾಫ್ಟೊನಿಕ್ ವೆಬ್ಸೈಟ್‌ನಲ್ಲಿ ಹುಡುಕಿ ಎಪಿಕೆ ಫೈಲ್ ಒಂದನ್ನು ಡೌನ್ ಲೋಡ್ ಮಾಡಿದ್ದೆ. ಸಾಫ್ಟೊನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರವನ್ನು ನೊಂದಾಯಿಸಿದ್ದೆ. ಆ ಆ್ಯಪ್‌ನಲ್ಲಿ ಬೇರೆ ಬೇರೆ ಕಂಪನಿಗಳಿದ್ದು, ಅದರಲ್ಲಿ ಕೆಲವನ್ನು ಆಯ್ಕೆ ಮಾಡಿ 2024 ಜನವರಿ ತಿಂಗಳಿನಿಂದ 2025ರ ನವೆಂಬರ್‌ವರೆಗೆ ಸುಮಾರು ₹ 19.06 ಲಕ್ಷ ಹೂಡಿಕೆ ಮಾಡಿದ್ದೆ. ಸುಮಾರು ₹ 1 ಲಕ್ಷದಷ್ಟು ಹಣ ಮರಳಿ ಸಿಕ್ಕಿದೆ. ನಂತರ ನನ್ನ ಬ್ಯಾಂಕ್ ಖಾತೆ ಸ್ಥಗಿತವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಈ ಬಗ್ಗೆ ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.