ADVERTISEMENT

ತನಿಖೆ ಮುಗಿದರೂ ಕೊನೆಯಾಗದ ಗೊಂದಲ

ಮಂಗಳೂರು ಗೋಲಿಬಾರ್‌ಗೆ ಒಂದು ವರ್ಷ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 21:11 IST
Last Updated 18 ಡಿಸೆಂಬರ್ 2020, 21:11 IST

ಮಂಗಳೂರು: ನಗರದಲ್ಲಿ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟ ಘಟನೆಗೆ ಶನಿವಾರ (ಇದೇ 19)
ಒಂದು ವರ್ಷವಾಗಲಿದೆ. ಇದುವರೆಗೆ ಪ್ರಕರಣದ ಕುರಿತು ಮೂರು ಸಂಸ್ಥೆಗಳಿಂದ ತನಿಖೆ ನಡೆಯುತ್ತಿದ್ದು, ಇದುವರೆಗೆ ಸ್ಪಷ್ಟತೆ ಮಾತ್ರ ಸಿಕ್ಕಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಪೊಲೀಸರ ಮೇಲೆಯೇ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ಆರೋಪ ಮಾಡಿದ್ದರೆ, ಅನಗತ್ಯವಾಗಿ ಗೋಲಿಬಾರ್ ನಡೆಸುವ ಮೂಲಕ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂಬ ದೂರು ಮುಸ್ಲಿಂ ಒಕ್ಕೂಟ, ಸಂಘಟನೆ
ಗಳದ್ದು. ಮ್ಯಾಜಿಸ್ಟೀರಿಯಲ್‌ ವರದಿ ಸಲ್ಲಿಕೆಯಾಗಿದ್ದರೂ, ಸರ್ಕಾರ ಮೌನ ವಹಿಸಿದೆ ಎನ್ನುವ ಮಾತುಗಳೂ ಇವೆ.

‘2019ರ ಡಿ.19 ರಂದು ನಗರದಲ್ಲಿ ನಡೆದ ಗೋಲಿಬಾರ್‌ಗೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್‌ ತನಿಖೆ
ಯನ್ನು ನಡೆಸಲಾಗಿದ್ದು, 50 ಪುಟಗಳ ವರದಿ ಮತ್ತು 2,500 ದಾಖಲೆಗಳನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ನವೆಂಬರ್‌ 4 ರಂದು ಸಲ್ಲಿಸಲಾಗಿದೆ’ ಎಂದು ತನಿಖಾಧಿಕಾರಿಯಾಗಿದ್ದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.