ADVERTISEMENT

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:10 IST
Last Updated 12 ಜುಲೈ 2021, 4:10 IST
ಕುಕ್ಕೆ ಸುಬ್ರಹ್ಮಣ್ಯ ದೇವಳದ ರಥಬೀದಿಯಲ್ಲಿ ಭಾನುವಾರ ಜನದಟ್ಟಣಿ ಇತ್ತು.
ಕುಕ್ಕೆ ಸುಬ್ರಹ್ಮಣ್ಯ ದೇವಳದ ರಥಬೀದಿಯಲ್ಲಿ ಭಾನುವಾರ ಜನದಟ್ಟಣಿ ಇತ್ತು.   

ಸುಬ್ರಹ್ಮಣ್ಯ: ಅನ್‌ಲಾಕ್‌ ನಂತರದ ಮೊದಲ ಭಾನುವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದರು. ರಥಬೀದಿಯಲ್ಲಿ ಅಧಿಕ ಭಕ್ತರು ಕಂಡುಬಂದರು.

ರಥಬೀದಿಯಲ್ಲಿ ಹಾಕಿರುವ ಚೌಕದಲ್ಲಿ ಸಾಗಿ ರಾಜಗೋಪುರದ ಪ್ರಧಾನ ದ್ವಾರದ ಮೂಲಕ ಭಕ್ತರು ದೇವಳ ಪ್ರವೇಶಿಸಿದರು. ಗೋಪುರದ ಬಳಿ ಸಿಬ್ಬಂದಿ, ಭಕ್ತರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ಯಾನಿಟೈಸರ್ ನೀಡಿದರು. ಬಳಿಕ ಹೊರಾಂಗಣದಲ್ಲಿ ಹಾಕಿದ ಚೌಕದ ಮೂಲಕ ಸಾಗಿ ಉತ್ತರದ ಬಾಗಿಲಿನಿಂದ ಒಳಾಂಗಣ ಪ್ರವೇಶಿಸಿ ದೇವರ ದರ್ಶನ ಪಡೆದರು.

ಹೆಚ್ಚಿನ ಭಕ್ತರು ಸ್ವಂತ ವಾಹನದಲ್ಲಿ ಕ್ಷೇತ್ರಕ್ಕೆ ಬಂದಿದ್ದರು. ಈ ಕಾರಣ ಕ್ಷೇತ್ರದಲ್ಲಿ ವಾಹನ ದಟ್ಟಣೆ ಕಂಡುಬಂತು. ಕೆಲವರು ಬಸ್ ಮತ್ತು ರೈಲಿನಲ್ಲಿ ಬಂದಿದ್ದರು. ಭಕ್ತರಿಗೆ ದೇವಳದ ವಸತಿ ಗೃಹದಲ್ಲಿ ತಂಗಲು ಅವಕಾಶ ನೀಡಲಾಗಿಲ್ಲ. ಭೋಜನ ಪ್ರಸಾದ, ಗಂಧ ಪ್ರಸಾದ, ತೀರ್ಥ ಪ್ರಸಾದ, ಮೂಲಮೃತ್ತಿಕೆ ಪ್ರಸಾದ ವಿತರಣೆ, ದೇವರ ಸೇವೆ ನಿರ್ಬಂಧಿಸಲಾಗಿತ್ತು.

ADVERTISEMENT

ಲಾಕ್‌ಡೌನ್‌ ಕಾರಣಕ್ಕೆ ಏಪ್ರಿಲ್ 21ರಿಂದ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. 75 ದಿನಗಳ ನಂತರ ದೇವಾಲಯಕ್ಕೆ ಪ್ರವೇಶದ ಅವಕಾಶ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.