ADVERTISEMENT

ಮಂಗಳೂರು: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 8:34 IST
Last Updated 5 ಮಾರ್ಚ್ 2021, 8:34 IST
   

ಮಂಗಳೂರು:ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕ ದಂಧೆಯಲ್ಲಿ ನಿರತರಾಗಿದ್ದಐವರನ್ನು ಬಂಧಿಸಿದ್ದಾರೆ.

ನಂದನ್ ಎಸ್ ನಾಯ್ಕ್, ಪ್ರಶಾಂತ್, ಅನಿಲ್ ಕುಮಾರ್ ಬಂಗೇರಾ, ದಿನಕರ ಆಳ್ವಾ, ಅನಿಲ್ ಕುಮಾರ್ ಕಾವೂರು ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಂದ ₹ 30,130 ನಗದು, ಹಾಗೂ 5 ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹66,130 ಮೌಲ್ಯದ ವಸ್ತುಗಳನ್ನು, ಮಟ್ಕಾ ಬರೆಯುವ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ, ಬರ್ಕೆ, ಮಂಗಳೂರು ಉತ್ತರ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT