ADVERTISEMENT

ಪ್ರವಾಸಿತಾಣವಾಗಿ ಮೂಡುಬಿದಿರೆ: ವಿವಿಧ ಯೋಜನೆಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:46 IST
Last Updated 30 ಆಗಸ್ಟ್ 2025, 6:46 IST
ಮೂಡುಬಿದಿರೆ ಜೈನಮಠಕ್ಕೆ ‍‘ಪೆಟಾ’ ಸಂಸ್ಥೆ ಕೊಡುಗೆಯಾಗಿ ನೀಡಿದ ಯಾಂತ್ರಿಕ ಆನೆಯನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶುಕ್ರವಾರ ಅನಾವರಣಗೊಳಿಸಿದರು
ಮೂಡುಬಿದಿರೆ ಜೈನಮಠಕ್ಕೆ ‍‘ಪೆಟಾ’ ಸಂಸ್ಥೆ ಕೊಡುಗೆಯಾಗಿ ನೀಡಿದ ಯಾಂತ್ರಿಕ ಆನೆಯನ್ನು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶುಕ್ರವಾರ ಅನಾವರಣಗೊಳಿಸಿದರು   

ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಪ್ರಯುಕ್ತ ಸಾವಿರ ಕಂಬದ ಬಸದಿಯಲ್ಲಿ ಶುಕ್ರವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ಸುಮಾರು ₹ 5 ಕೋಟಿ ವೆಚ್ಚದಲ್ಲಿ ಜೈನಮಠದ ಜೀರ್ಣೋದ್ಧಾರ ಹಾಗೂ ಸುಮಾರು ₹ 10 ಲಕ್ಷ ವೆಚ್ಚದಲ್ಲಿ 400ರಷ್ಟು ಪ್ರಾಚೀನ ತಾಡಓಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಆಚಾರ್ಯ 108 ಗುಲಾಬ್ ಭೂಷಣ ಮುನಿ ಚಾಲನೆ ನೀಡಿದರು.

ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ADVERTISEMENT

ಐತಿಹಾಸಿಕ ಮಹತ್ವವನ್ನು ಹೊಂದಿರುವ ಮೂಡುಬಿದಿರೆ ಜೈನಕಾಶಿ ಪ್ರವಾಸಿ ತಾಣವಾಗಿ ಅಂತತರಾಷ್ಟ್ರೀಯ ಮಟ್ಟದಲ್ಲಿ ಯಾತ್ರಿಕರನ್ನು ಆಕರ್ಷಿಸುತ್ತಿದೆ. ಇಂದಿನ ಅಗತ್ಯಕ್ಕೆ ಪೂರಕವಾಗಿ ಜೈನಮಠ ಹಾಗೂ ಬಸದಿಗಳ ಅಭಿವೃದ್ಧಿಗೆ ಯೋಜನೆಯನ್ನು ಹಮ್ಮಿಕೊಂಡಿದ್ದು, ಭಕ್ತರು ಈ ಪುಣ್ಯ ಕೆಲಸದಲ್ಲಿ ಕೈಜೋಡಿಸಬೇಕು ಎಂದರು.

ಜೈನ ಧರ್ಮದ ಕುರಿತ ಮೂರು ಗ್ರಂಥಗಳನ್ನು ಅನಾವರಣಗೊಳಿಸಲಾಯಿತು.

ಬಸದಿಗಳ ಮೊಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ಆದರ್ಶ್‌ ಅರಮನೆ, ಪ್ರಮುಖರಾದ ಶೈಲೇಂದ್ರ ಕುಮಾರ್, ಬಾಹುಬಲಿ ಪ್ರಸಾದ್, ಸಂಪತ್ ಸಾಮ್ರಾಜ್ಯ, ಸುಧೀಶ್, ಗುಣಪಾಲ ಕಡಂಬ ಭಾಗವಹಿಸಿದ್ದರು.

ಯಾಂತ್ರಿಕ ಆನೆ ಕೊಡುಗೆ: ಸಿನಿಮಾ ನಟಿ ರವೀನಾ ಟಂಡನ್ ಹಾಗೂ ಪುತ್ರಿ ದಶಾ ತದಾನಿ ಸುಮಾರು ₹ 6 ಲಕ್ಷ ವೆಚ್ಚದಲ್ಲಿ ‘ಪೆಟಾ’ ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಯಾಂತ್ರಿಕ ಆನೆಯನ್ನು ಸಂಸ್ಥೆಯು ಜೈನಮಠಕ್ಕೆ ಹಸ್ತಾಂತರಿಸಿತು. ಬಳಿಕ ಸ್ವಾಮೀಜಿ ಅನಾವರಣಗೊಳಿಸಿದರು. ಪೆಟಾ ಅಧಿಕಾರಿ ಅರುಣ್ ಕುಮಾರ್, ಸುಪ್ರಿಯಾ ಜತೆಗಿದ್ದರು

ಮೂಡುಬದಿರೆಯ ಸಾವಿರಕಂಬದ ಬಸದಿಯಲ್ಲಿ ತಾಳೆಗರಿಗಳ ಡಿಜಿಟಲೀಕರಣಕ್ಕೆ ಗುಲಾಬ್ ಭೂಷಣ್ 108 ಮುನಿಸಾಗರ್ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.