ADVERTISEMENT

ಎಂಆರ್‌ಪಿಎಲ್‌: ₹ 3,353 ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 16:36 IST
Last Updated 9 ಜೂನ್ 2020, 16:36 IST

ಮಂಗಳೂರು: ಇಲ್ಲಿನ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊ ಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) 2019–20ನೇ ಹಣಕಾಸು ವರ್ಷದಲ್ಲಿ ಒಟ್ಟು₹ 3,353 ಕೋಟಿ ನಷ್ಟ ಅನುಭವಿಸಿದೆ.

ಕಂಪನಿಯ ನಾಲ್ಕನೇ ತ್ರೈಮಾಸಿಕದ ಲೆಕ್ಕಪತ್ರ ವರದಿಯನ್ನು ಆಡಳಿತ ಮಂಡಳಿಯು ಮಂಗಳವಾರ ಅಂಗೀಕರಿಸಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕ ಒಂದರಲ್ಲೇ ₹1,887 ಕೋಟಿ ನಷ್ಟ ಉಂಟಾಗಿದೆ.

2019–20ನೇ ಆರ್ಥಿಕ ವರ್ಷದಲ್ಲಿ ₹60,728 ಕೋಟಿ ವಹಿವಾಟು ನಡೆಸಿದ್ದು, ₹3,353 ಕೋಟಿ ನಷ್ಟ ಅನುಭವಿಸಿದೆ. 2018–19ನೇ ಆರ್ಥಿಕ ವರ್ಷದಲ್ಲಿ ಕಂಪನಿ ₹72,283 ಕೋಟಿ ಮೊತ್ತದ ಒಟ್ಟು ವಹಿವಾಟು ನಡೆಸಿದ್ದು, ₹340 ಕೋಟಿ ಮೊತ್ತದ ನಿವ್ವಳ ಲಾಭ ಗಳಿಸಿತ್ತು. ಆ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲೇ ಕಂಪನಿಗೆ ₹ 355 ಕೋಟಿ ನಿವ್ವಳ ಲಾಭ ದೊರಕಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.