ADVERTISEMENT

ಉಪ್ಪಿನಂಗಡಿ: ಕುಮಾರಧಾರ ಸೇತುವೆಯಲ್ಲಿ ಕೆಸರು ನೀರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 15:33 IST
Last Updated 19 ಜೂನ್ 2023, 15:33 IST
ಉಪ್ಪಿನಂಗಡಿ ಕುಮಾರಧಾರ ಸೇತುವೆಯಲ್ಲಿ ಕೆಸರು ನೀರು ನಿಂತಿರುವುದು
ಉಪ್ಪಿನಂಗಡಿ ಕುಮಾರಧಾರ ಸೇತುವೆಯಲ್ಲಿ ಕೆಸರು ನೀರು ನಿಂತಿರುವುದು   

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿಯ ಕುಮಾರಧಾರ ಸೇತುವೆಯ ಮೇಲೆ ಕೆಸರು ನೀರು ನಿಂತಿದ್ದು ಮಳೆಗಾಲದಲ್ಲಿ ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಗೆ ಬರುವ ಈ ಸೇತುವೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಮಾಡಿದ ರಂಧ್ರಗಳು ಮಣ್ಣು, ಕಸದಿಂದ ಮುಚ್ಚಿಕೊಂಡಿದ್ದು,  ಧಾರಾಕಾರ ಮಳೆ ಬಂದಾಗ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದು, ವಾಹನಗಳು ಸೇತುವೆಯ ಮೇಲೆ ಸಂಚರಿಸುವಾಗ ಈ ಕೆಸರು ನೀರು ಪಾದಚಾರಿಗಳ ಮೇಲೆ, ದ್ವಿಚಕ್ರ ವಾಹನ ಸವಾರರ ಮೇಲೆ ಸಿಂಪಡಣೆಯಾಗುತ್ತಿದೆ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಶೀಘ್ರವೇ ಸೇತುವೆ ಬದಿಯಲ್ಲಿ ಸಂಗ್ರಹಗೊಂಡ ಹೂಳು ತೆಗೆದು ಸ್ವಚ್ಛಗೊಳಿಸಬೇಕು’ ಎಂದು ಆಟೊ ರಿಕ್ಷಾ ಚಾಲಕರ ಸಂಘದ ಖಲಂದರ್ ಶಾಫಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.