ADVERTISEMENT

ನಿಕಾಹ್ ವೇದಿಕೆಗೆ ಬಂದು ವರನಿಂದ ‘ಮಹರ್’ ಸ್ವೀಕರಿಸಿದ ವಧು

ಮುಸ್ಲಿಂ ಸಂಪ್ರದಾಯದ ಮದುವೆ: ನಿಕಾಹ್ ವೇದಿಕೆಯಲ್ಲಿ ಮದುಮಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 4:32 IST
Last Updated 4 ಆಗಸ್ಟ್ 2022, 4:32 IST
ಕುಟ್ಯಾಡಿ ಮಸೀದಿಯಲ್ಲಿ ಈಚೆಗೆ ನಡೆದ ಮದುವೆಯ ನಿಕಾಹ್
ಕುಟ್ಯಾಡಿ ಮಸೀದಿಯಲ್ಲಿ ಈಚೆಗೆ ನಡೆದ ಮದುವೆಯ ನಿಕಾಹ್   

ಕಾಸರಗೋಡು: ಸಮೀಪದ ಕುಟ್ಯಾಡಿ ಪಾಲೇರಿ ಪರಕ್ಕಡವು ಜುಮಾ ಮಸೀದಿಯಲ್ಲಿ ಈಚೆಗೆ ನಡೆದ ‘ನಿಕಾಹ್‌’ನಲ್ಲಿ ಪಾಲ್ಗೊಂಡ ವಧು, ವರನಿಂದ ನೇರವಾಗಿ ‘ಮಹರ್’(ವಧುವಿನ ಉಡುಗೊರೆ) ಸ್ವೀಕರಿಸಿರುವ ವಿಡಿಯೊ ವೈರಲ್‌ ಆಗಿದೆ.

ಮುಸ್ಲಿಂ ಸಮುದಾಯದ ಮದುವೆಯಲ್ಲಿ ವಧುವಿನ ತಂದೆ ‘ಮಹರ್‌’ (ವಧುವಿನ ಉಡುಗೊರೆ) ಸ್ವೀಕರಿಸುವುದು ರೂಢಿ. ಸಾಮಾನ್ಯವಾಗಿ ಮಗಳ ಒಪ್ಪಿಗೆಯೊಂದಿಗೆ ಮನೆಯಿಂದ ನಿಕಾಹ್ ವೇದಿಕೆಗೆ ತೆರಳುವ ತಂದೆ, ನಿಕಾಹ್ ನಡೆದ ನಂತರ ವರನಿಂದ ‘ಮಹರ್‌’ ಸ್ವೀಕರಿಸುತ್ತಾರೆ.

ಕುಟ್ಯಾಡಿಯ ಕೆ.ಎಸ್. ಉಮರ್‌ ಅವರ ಪುತ್ರಿ ಬಹ್ಜಾ ದಲಿಲಾ (ವಧು) ಅವರು ಚೆರುವಕ್ಕರ ಖಾಸಿಂ ಅವರ ಪುತ್ರ ಫಹಾದ್ ಖಾಸಿಂ (ವರ) ಅವರಿಂದ ನೇರವಾಗಿ ನಿಕಾಹ್ ವೇದಿಕೆಯಲ್ಲೇ ಮಹರ್‌ ಸ್ವೀಕರಿಸಿದ್ದಾರೆ.

ADVERTISEMENT

‘ಧಾರ್ಮಿಕ ವಿದ್ವಾಂಸರನ್ನು ವಿಚಾರಿಸಿ, ಸಕಾರಾತ್ಮಕ ಸ್ಪಂದನೆ ದೊರೆತ ಕಾರಣ ನಿಕಾಹ್ ವೇದಿಕೆಗೆ ವಧು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಮಹಲ್ಜಮಾತ್ ಪ್ರಧಾನ ಕಾರ್ಯದರ್ಶಿ ಇ.ಜೆ. ಮುಹಮ್ಮದ್ ನಿಯಾಝ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.