ಮಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‌ಗೆ ₹4ರಂತೆ ಹೆಚ್ಚಿಸಲಾಗಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟವೂ ದರ ಪರಿಷ್ಕರಣೆ ಮಾಡಿದೆ.
ಆದರೆ, ಅರ್ಧ ಲೀಟರ್ ಹಾಲಿನ ಪೊಟ್ಟಣಗಳಲ್ಲಿ ಮೊದಲು 50 ಮಿಲಿ ಲೀಟರ್ ಹೆಚ್ಚುವರಿ ಹಾಲು ನೀಡಲಾಗುತ್ತಿತ್ತು (ಹೆಚ್ಚುವರಿ 50 ಮಿಲಿ ಲೀಟರ್ ಹಾಲಿಗೆ ₹2 ರೂಪಾಯಿ ಹೆಚ್ಚುವರಿ ದರ ಪಡೆಯಲಾಗುತ್ತಿತ್ತು). ಆ ಹಾಲಿನ ಪ್ರಮಾಣ ಕಡಿತ ಮಾಡಲಾಗಿದೆ. ಈಗ 500 ಮಿಲಿ ಲೀಟರ್ ಹಾಲು ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಅರ್ಧ ಲೀಟರ್‌ನ ಡೋನ್ಡ್ ಹಾಲು, ಹಸುವಿನ ಹಾಲು ಹಾಗೂ ಶುಭಂ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಆದರೆ, ಒಂದು ಲೀಟರ್ ಪೊಟ್ಟಣದಲ್ಲಿ 1050 ಮಿಲಿ ಲೀಟರ್ ಹಾಲು ನೀಡಲಾಗುತ್ತಿತ್ತು. ಈಗ 50 ಮಿಲಿ ಲೀಟರ್ ಹಾಲು ಕಡಿಮೆ ಮಾಡಿ, 1000 ಮಿಲಿ ಲೀಟರ್ ಹಾಲು ಮಾತ್ರ ನೀಡಲಾಗುತ್ತಿದೆ. ಹೀಗಾಗಿ ಒಂದು ಲೀಟರ್ ಪೊಟ್ಟಣದ ಹಾಲಿನ ದರದ ಮೇಲೆ ಹಿಂದಿನಿಗಿಂತ ₹2 ಹೆಚ್ಚಳವಾಗಿದೆ. ಮೊಸರು ಮತ್ತು ಇತರೆ ಮೊಸರಿನ ಉತ್ಪನ್ನಗಳ ದರ ಹೆಚ್ಚಳ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.