ADVERTISEMENT

ಶೂದ್ರರಿಗೆ ನಾರಾಯಣ ಗುರು ಪ್ರೇರಣೆ: ಎನ್. ಪದ್ಮನಾಭ ಮಾಣಿಂಜ

ಬೆಳ್ತಂಗಡಿಯಲ್ಲಿ ‘ನಮ್ಮೊಳಗಿನ ನಾಣು’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 4:30 IST
Last Updated 29 ಮಾರ್ಚ್ 2021, 4:30 IST
ಸಂವಾದ ಕಾರ್ಯಕ್ರಮ
ಸಂವಾದ ಕಾರ್ಯಕ್ರಮ   

ಬೆಳ್ತಂಗಡಿ: ‘ಅಸ್ಪೃಶ್ಯತೆಯಿಂದ ಒದ್ದಾಡುತ್ತಿದ್ದ ಶೂದ್ರರಿಗೆ ನಾರಾಯಣ ಗುರು ಸೂಕ್ತ ದಾರಿಯನ್ನು ತೋರಿಸದೇ ಇರುತ್ತಿದ್ದರೆ, ಬಿಲ್ಲವ ಸಮಾಜವು ಇಂದಿಗೂ ತುಳಿತಕ್ಕೆ ಒಳಗಾಗಬೇಕಿತ್ತು’ ಎಂದು ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಎನ್. ಪದ್ಮನಾಭ ಮಾಣಿಂಜ ಹೇಳಿದರು.

ಬೆಳ್ತಂಗಡಿ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವವಾಹಿನಿ ಬೆಳ್ತಂಗಡಿ ಘಟಕ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿ ಇವುಗಳ ಸಹಕಾರದೊಂದಿಗೆ ಆಶಾ ಸಾಲಿಯಾನ್ ಸಭಾಂಗಣದಲ್ಲಿ ಭಾನುವಾರ ನಡೆದ ‘ನಮ್ಮೊಳಗಿನ ನಾಣು’ ನಾರಾಯಣ ಗುರು ವಿಚಾರ ಸಂಪದವನ್ನು ಉದ್ಘಾಟಿಸಿ ಮಾತನಾಡಿದರು.

‘ನಾರಾಯಣ ಗುರು ಜನನ ಪೂರ್ವ ಸಮಾಜ’ ಎಂಬ ವಿಷಯದಲ್ಲಿ ಲೇಖಕಿ ಬಿ.ಎಂ.ರೋಹಿಣಿ, ‘ಪರಿವರ್ತನೆಯ ಹರಿಕಾರ ನಾರಾಯಣ ಗುರು’ ವಿಷಯದಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ.ಶೇಷಪ್ಪ ಅಮೀನ್, ‘ಪ್ರಸ್ತುತ ಸಮಾಜ, ಮುಂದಿನ ನಡೆ’ ವಿಷಯದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ವಿಚಾರ ಮಂಡಿಸಿದರು.

ADVERTISEMENT

ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ನರೇಶ್ ಕುಮಾರ್ ಸಸಿಹಿತ್ಲು ಸಮನ್ವಯಕಾರರಾಗಿ ವಿಚಾರ ಸಂಪದವನ್ನು ನಡೆಸಿಕೊಟ್ಟರು. ಮಾಜಿ ಶಾಸಕ ವಸಂತ ಬಂಗೇರ ಶುಭ ಹಾರೈಸಿದರು. ತಾಲ್ಲೂಕು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ರಂಜಿತ್ ಎಚ್.ಡಿ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ರಾಜಶ್ರೀ ರಮಣ್, ಯುವವಾಹಿನಿ ಮಹಿಳಾ ಸಂಚಲನಾ ಸಮಿತಿ ಅಧ್ಯಕ್ಷೆ ಸುಜಾತಾ ಅಣ್ಣಿ ಪೂಜಾರಿ ಇದ್ದರು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಸಾದ್ ಎಂ.ಕೆ. ಸ್ವಾಗತಿಸಿ, ಚಂದ್ರಹಾಸ್ ಬಳಂಜ, ಸಮೀಕ್ಷಾ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ನಾರಾಯಣ ಸುವರ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.