ಪ್ರಾತಿನಿಧಿಕ ಚಿತ್ರ
ಮಂಗಳೂರು: ಆಲ್ ಇಂಡಿಯಾ ಕ್ಯಾಶ್ಯು ಅಸೋಸಿಯೇಶನ್ (ಎಐಸಿಎ) ನೇತೃತ್ವ ಹಾಗೂ ಇತರ ಕೆಲವು ಸಂಘಟನೆಗಳ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನ ಮಾನ್ಯತಾ ಪಾರ್ಕ್‌ನ ಹಿಲ್ಟನ್‌ನಲ್ಲಿ ಆಗಸ್ಟ್ 8ರಿಂದ 10ರವರೆಗೆ ‘ಗೋಡಂಬಿ’ (ಗೇರು ಬೀಜ) ಕುರಿತ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ಆಂತರಿಕವಾಗಿ ಕಚ್ಚಾ ಗೋಡಂಬಿ ಉತ್ಪಾದನೆ ಹೆಚ್ಚಿಸುವುದು, ಕಾರ್ಖಾನೆ ಗಳ ತಂತ್ರಜ್ಞಾನ ಉನ್ನತೀಕರಣ, ದೇಶದಲ್ಲಿ ಗೋಡಂಬಿ ಬಳಕೆ ಉತ್ತೇಜಿ ಸುವುದೇ ಮುಂತಾದ ಅನೇಕ ವಿಷಯ ಗಳ ಬಗ್ಗೆ ಇಲ್ಲಿ ವಿಚಾರ ವಿನಿಮಯ ನಡೆಯಲಿದೆ. ಗುರುವಾರ(ಆ.8) ಸಂಜೆ 5 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯ ಲಿದ್ದು, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಅಧ್ಯಕ್ಷ ಅಭಿಷೇಕ್ ದೇವ್ ಮುಖ್ಯ ಅತಿಥಿಯಾಗಿರುತ್ತಾರೆ. ನಿರ್ದೇಶಕ ಡಾ. ತರುಣ್ ಬಜಾಜ್, ಗೋಡಂಬಿ ಮತ್ತು ಎಫ್‌ಎಸ್‌ಎಸ್‌ಎಐ ಸಲಹೆಗಾರರಾದ ಅಲ್ಕಾ ರಾವ್, ನಟ್ಸ್ & ಡ್ರೈ ಫ್ರೂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಗುಂಜನ್ ಜೈನ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.