ADVERTISEMENT

ಎನ್‌ಎಂಪಿಎ ಸುವರ್ಣ ಮಹೋತ್ಸವ ಓಟ: ಅಕ್ಷಯ್, ಶ್ರೇಯಾಗೆ 10ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 9:40 IST
Last Updated 31 ಆಗಸ್ಟ್ 2025, 9:40 IST
   

ಮಂಗಳೂರು: ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ನಿಡುಗುಂಬದ ಅಕ್ಷಯ್ ಎ.ಆರ್‌ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಚೊಕ್ಕಾಡಿ ನಿವಾಸಿ ಶ್ರೇಯಾ ಎಂ ಅವರು ನವ ಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ನಗರದಲ್ಲಿ ನಡೆದ 10ಕೆ ಓಟದಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಪಣಂಬೂರು ಬೀಚ್‌ ಮತ್ತು ಸಮೀಪದ ರಸ್ತೆಯಲ್ಲಿ ನಡೆದ ಓಟದಲ್ಲಿ ಅಕ್ಷಯ್ 37 ನಿಮಿಷ 28 ಸೆಕೆಂಡುಗಳಲ್ಲಿ ಮತ್ತು ಶ್ರೇಯಾ 43 ನಿಮಿಷ 4 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ನಗರದ ಶ್ರೀನಿವಾಸ ಕಾಲೇಜಿನ ಬಿಇ 4ನೇ ವರ್ಷದ ವಿದ್ಯಾರ್ಥಿ ಅಕ್ಷಯ್ ವಿಶ್ವವಿದ್ಯಾಲಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಮ್ಯಾರಥಾನ್‌, ಹಾಫ್ ಮ್ಯಾರಥಾನ್ ಸೇರಿದಂತೆ ದೂರ ಅಂತರದ ಓಟದಲ್ಲಿ ಈಚೆಗೆ ಮಿಂಚುತ್ತಿರುವ ಶ್ರೇಯಾ ಉಡುಪಿಯಲ್ಲಿ ಕಳೆದ ವಾರ ನಡೆದ 23 ವರ್ಷದೊಳಗಿನವರ ರಾಜ್ಯ ಅಥ್ಲೆಟಿಕ್‌ ಕೂಟದ 1500 ಮೀಟರ್ಸ್ ಓಟ ಮತ್ತು ಸ್ಟೀಪಲ್‌ ಚೇಸ್‌ನಲ್ಲಿ ಚಿನ್ನ ಗೆದ್ದಿದ್ದರು. ಅವರು ನಗರದ ಶ್ರೀದೇವಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿ.

ADVERTISEMENT

10ಕೆ ಓಟದ ಪುರುಷರ ವಿಭಾಗದ ಚಾಂಪಿಯನ್ ಅಕ್ಷಯ್‌ಗೆ ಎನ್ಎಂಪಿಎ ಅಧ್ಯಕ್ಷ ಎ.ವಿ.ರಮಣ ಟ್ರೋಫಿ ವಿತರಿಸಿದರು.

5 ಕೆ ಓಟದ 17ರಿಂದ 30 ವರ್ಷದೊಳಗಿನವರ ಪುರುಷರ ವಿಭಾಗದಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ರಂಗಣ್ಣ ನಾಯ್ಕರ್ ಮೊದಲಿಗರಾದರು. ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿರುವ ಅವರು 15 ನಿಮಿಷ 30 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಉಡುಪಿಯಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್‌ನ 20 ವರ್ಷದೊಳಗಿನವರ ವಿಭಾಗದಲ್ಲಿ ಅವರು 1500 ಮೀಟರ್ಸ್ ಓಟ ಮತ್ತು ಸ್ಟೀಪಲ್ ಚೇಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸುಹಾನಾ ಅಬ್ದುಲ್ ಖಾದರ್ 26 ನಿಮಿಷ 36 ಸೆಕೆಂಡುಗಳಲ್ಲಿ ಓಟ ಪೂರ್ತಿಗೊಳಿಸಿದರು. ಮಂಗಳೂರಿನ ನಂತೂರಿನವರಾದ ಅವರು ಗ್ರಾಫಿಕ್ ಡಿಸೈನ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

5ಕೆ ಓಟದ ಪ್ರಶಸ್ತಿ ಗೆದ್ದ ರಂಗಣ್ಣ ನಾಯ್ಕರ (ಎಡ) ಮತ್ತು 10 ಕೆ ಓಟದ ಚಾಂಪಿಯನ್ ಅಕ್ಷಯ್ ಎ.ಆರ್

ಸುಹಾನಾ ಅಬ್ದುಲ್ ಖಾದರ್

ಫಲಿತಾಂಶಗಳು:

10ಕೆ ಓಟ: ಪುರುಷರು: 18ರಿಂದ 30 ವರ್ಷ: ಅಕ್ಷಯ ಎ.ಆರ್‌–1. ಕಾಲ: 37ನಿಮಿಷ 28ಸೆಕೆಂಡು, ಗೌತಮ್‌–2, ಜಹೀದ್ ಅಬ್ದುಲ್ ಖಾದರ್–3, 31ರಿಂದ 40 ವರ್ಷ: ಸುದೀಪ್ ಕುಮಾರ್‌–1. ಕಾಲ: 38:22, ರವಿಕಿರಣ್ ದೂಪ–2, ಸುನಿಲ್ ಸಿ.ಕೆ–3; 41ರಿಂದ 50 ವರ್ಷ: ಲೋಕೇಶ್ ಕೆ.ಜಿ–1. ಕಾಲ: 40:29, ಚಂದ್ರನ್‌ ವಿ.ವಿ–2, ಶಿವಕುಮಾರ್–3; 41ರಿಂದ 50 ವರ್ಷ: ನಾರಾಯಣ ಮೂಲ್ಯ–1. ಕಾಲ: 42:55, ವಿಶ್ವನಾಥ ಕೋಟ್ಯಾನ್‌–2, ರಮೇಶ್ ಪೈ–3; 60ರ ಮೇಲಿನವರು: ಮಾಧನ ಸರಿಪಳ್ಳ–1. ಕಾಲ: 53:51, ಓಂ ಶಿವ ಕೋಟ್ಯಾನ್–2, ಗಣೇಶ್–3.

ಮಹಿಳೆಯರು: 18ರಿಂದ 30 ವರ್ಷ: ಶ್ರೇಯಾ–1. ಕಾಲ: 43:04, ಗೋಮಿನಿ ರೆಡ್ಡಿ–2, ನಿಧಿ ಅನಾ ಸಿಕ್ವೇರ–3; 31ರಿಂದ 40 ವರ್ಷ: ಮೇಹ್ವಿಶ್‌ ಹುಸೇನ್‌–1. ಕಾಲ: 48:33, ಪ್ರಜೀತಾ ಪಿ.ವಿ–2, ಸುಪ್ರೀತಾ ಎಸ್‌್–3; 41ರಿಂದ 50 ವರ್ಷ: ಕೃತಿ ಉಳ್ಳಾಲ್‌–1. ಕಾಲ:51:47, ಅನುಪಮಾ ರಾವ್‌–2, ಜೂಲಿ ಮಿಸ್ಕಿತ್‌–3; 51ರಿಂದ 60 ವರ್ಷ: ಪೃತೀವಾ ಸ್ಟೀವಾ ಲೊಬೊ–1. ಕಾಲ: 1ಗಂಟೆ 04:36ನಿ, ಮಂಜುಳಾ ಶಾಂತಾರಾಜ್–2, ಪೂರ್ಣಿಮಾ ಕೆ–3; 60 ವರ್ಷ ಮೇಲಿನವರು: ಅರುಣಕಲಾ ರಾವ್‌–1. ಕಾಲ: 1:10.22.

5 ಕೆ ಓಟ: 17ರಿಂದ 30 ವರ್ಷ: ರಂಗಣ್ಣ ನಾಯ್ಕರ–1. ಕಾಲ: 15:30, ನೌಫಲ್‌–2, ಬಸವರಾಜ್ ಚಿಗರಿ–3; 16 ವರ್ಷದೊಳಗಿನವರು: ನಿಕುಂಜ್‌–1. ಕಾಲ: 20:24, ಮನ್ವಿತ್–2, ಆದಿತ್ಯ–3; 31ರಿಂದ 45 ವರ್ಷ: ಮಿಥುನ್ ಕುಮಾರ್–1. ಕಾಲ: 19:55, ಶರುಣ್ ಕೋಟ್ಯಾನ್–2, ನರಸಿಂಗ ರಾವ್‌–3; 46ರಿಂದ 60 ವರ್ಷ: ಶಿವಾನಂದ ಗಾಣಿಗೇರ–1. ಕಾಲ: 21:59, ಸುರೇಶ್ ಪಟ್ನಗೆರೆ–2, ಸದಾನಂದ ಆಳ್ವ–3; 61ಕ್ಕೂ ಮೇಲಿನವರು: ಹೊಸೂರು ಉದಯಕುಮಾರ್ ಶೆಟ್ಟಿ–1. ಕಾಲ: 23:45, ವಲೇರಿಯ ಫ್ರ್ಯಾಂಕ್‌–2, ಶಿವರಾಮ–3; 17ರಿಂದ 30 ವರ್ಷದ

ಮಹಿಳೆಯರು: ಸುಹಾನ ಎ.ಕೆ–1. ಕಾಲ: 26:36, ಅಂಜನಾ ಟಿ.ಕೆ–2, ಶಾಹಿನಾ ರೆಬೆಲ್ಲೊ–3; 16 ವರ್ಷದೊಳಗಿನವರು: ರಿಶ್ಮಾ–1. ಕಾಲ: 22:42, ಕೋಮಲ್‌–2, ಲಿತಿಕಾ–3; 31ರಿಂದ 45 ವರ್ಷ: ನಯನಾ ಶೆಟ್ಟಿ–1. ಕಾಲ: 28:10, ಶ್ರೀನಿಧಿ ಜೈನ್‌–2, ಪ್ರಿಯಾ ಆಳ್ವ–3; 46ರಿಂದ 60 ವರ್ಷ: ಸಬಿಯಾ ಇಸ್ರತ್‌ 37:08, ಸುಲೇಖಾ ಚತುರ್ವೇದಿ–2, ಸಂಧ್ಯಾ–3; 61ಕ್ಕೂ ಮೇಲಿನವರು: ಶ್ಯಾಮಲಾ ಪ್ರಭು–1. ಕಾಲ: 43:11, ಜಯಲಕ್ಷ್ಮಿ ಶೆಟ್ಟಿ–2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.