ADVERTISEMENT

ಡಿಜಿಟಲೀಕರಣ ಭ್ರಷ್ಟಾಚಾರ ಇಳಿಕೆಗೆ ಪೂರಕ

ಎನ್‌ಎಂಪಿಎ ವಿಚಕ್ಷಣಾ ಸಪ್ತಾಹದ ಸಮಾರೋಪದಲ್ಲಿ ಎ.ವಿ.ರಮಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:45 IST
Last Updated 23 ನವೆಂಬರ್ 2025, 5:45 IST
ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿಚಕ್ಷಣಾ ಸಪ್ತಾಹ ಆಚರಿಸಲಾಯಿತು
ನವ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ವಿಚಕ್ಷಣಾ ಸಪ್ತಾಹ ಆಚರಿಸಲಾಯಿತು   

ಮಂಗಳೂರು: ದೈನಂದಿನ ಕಾರ್ಯಗಳಲ್ಲಿ ಪಾರದರ್ಶಕತೆ, ಭ್ರಷ್ಟಾಚಾರರಹಿತ ಆಡಳಿತದ ಧ್ಯೇಯದೊಂದಿಗೆ ನವ ಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ) ವಿಚಕ್ಷಣಾ ಸಪ್ತಾಹವನ್ನು ಆಚರಿಸಿತು.

ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ, ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ನ ಮುಖ್ಯ ವಿಚಕ್ಷಣಾ ಅಧಿಕಾರಿ ಸಂಜಯ್ ಕೃಷ್ಣ ನವಲೆ ಅವರು, ‘ತಿ ಮತ್ತು ಸಮಗ್ರತೆಯ ಸಂಸ್ಕೃತಿ ನಿರ್ಮಾಣ ಕುರಿತು, ಆರ್ಡಿನೆನ್ಸ್ ಫ್ಯಾಕ್ಟರಿಯ ಪ್ರಧಾನ ವ್ಯವಸ್ಥಾಪಕ ವಿಜಯದತ್ ಕಗಿತಾ ಅವರು, ವೃತ್ತಿಯಲ್ಲಿ ಶಿಸ್ತು ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಎನ್‌ಎಂಪಿಎ ಅಧ್ಯಕ್ಷ ಎ.ವಿ.ರಮಣ ಮಾತನಾಡಿ, ತಂತ್ರಜ್ಞಾನ, ಯಾಂತ್ರೀಕರಣ, ಡಿಜಿಟಲೀಕರಣವು ಭ್ರಷ್ಟಾಚಾರ ತೊಡೆದು ಹಾಕುವಲ್ಲಿ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ನಡವಳಿಕೆಯಲ್ಲಿ ಸದಾ ಮೇಲ್ಪಂಕ್ತಿ ಕಾಯ್ದುಕೊಳ್ಳಬೇಕು. ನೈತಿಕತೆಯ ಪ್ರಜ್ಞೆ ಎಲ್ಲ ಹಂತಗಳಲ್ಲಿ ಅಳವಡಿಕೆಯಾಗಬೇಕು ಎಂದರು.

ADVERTISEMENT

ಎನ್‌ಎಂಪಿಎ ಮುಖ್ಯ ವಿಚಕ್ಷಣಾಧಿಕಾರಿ ಪದ್ಮನಾಭಾಚಾರ್ ಕೆ. ಮಾತನಾಡಿ, ‘ವಿಚಕ್ಷಣಾ ಜಾಗೃತಿ ಸಪ್ತಾಹದ ಪೂರ್ವಭಾವಿಯಾಗಿ ಎನ್‌ಎಂಪಿಎ ಅಧ್ಯಕ್ಷ ಎ.ವಿ. ರಮಣ ಅವರ ಕಲ್ಪನೆಯಲ್ಲಿ ಮೂರು ತಿಂಗಳ ಅಭಿಯಾನ ನಡೆಸಲಾಗಿದೆ. ಸಂಸ್ಥೆಯ ಸಿಬ್ಬಂದಿ ಸಾಮರ್ಥ್ಯ ವೃದ್ಧಿಗೆ ತರಬೇತಿ ಕಾರ್ಯಾಗಾರ, ಮಾಹಿತಿ ಹಕ್ಕು ಕಾಯ್ದೆ ಕುರಿತು ತಿಳಿವಳಿಕೆ, ಸೈಬರ್ ಭದ್ರತೆ ಕುರಿತು ಜಾಗೃತಿ ಮೂಡಿಸಲಾಗಿದೆ’ ಎಂದರು.

ಸಪ್ತಾಹದ ಅಂಗವಾಗಿ ನಡೆಸಿದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಗೌರವ ಅತಿಥಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.