ADVERTISEMENT

ಮಂಗಳೂರು | ಧರ್ಮಸ್ಥಳ ಭೇಟಿ ಕೊಟ್ಟ ಉಡುಪಿ ಪೇಜಾವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:11 IST
Last Updated 12 ಸೆಪ್ಟೆಂಬರ್ 2025, 6:11 IST
<div class="paragraphs"><p>ಧರ್ಮಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು</p></div>

ಧರ್ಮಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು

   

ಉಜಿರೆ: ಉಡುಪಿ ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗುರುವಾರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

ಬಳಿಕ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಪೂಜ್ಯ ಸ್ವಾಮೀಜಿಯವರ ಪಾದಪೂಜೆ ಮಾಡಲಾಯಿತು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪೂಜ್ಯ ಸ್ವಾಮೀಜಿಯವರಿಗೆ ತುಳಸಿ ಮಾಲೆ ಹಾಕಿ ಶಾಲು ಹೊದಿಸಿ ಗೌರವಿಸಿದರು.

ADVERTISEMENT

ಪೂಜ್ಯ ಪೇಜಾವರ ಸ್ವಾಮೀಜಿಯವರು ಹೆಗ್ಗಡೆಯವರಿಗೆ ಫಲ ಮಂತ್ರಾಕ್ಷತೆಯೊAದಿಗೆ ಪ್ರಸಾದ ನೀಡಿ ಆಶೀರ್ವದಿಸಿದರು. ಮಠದ ವತಿಯಿಂದ ಶಾಲು ಹೊದಿಸಿ, ಗೌರವಿಸಿದರು. ಹೇಮಾವತಿ ವೀ. ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರಿಗೂ ಸ್ವಾಮೀಜಿಯವರು ಪ್ರಸಾದ ನೀಡಿ ಆಶೀರ್ವದಿಸಿದರು.
ಬಳಿಕ ಸ್ವಾಮೀಜಿ ದೇವರದರ್ಶನ ಮಾಡಿ, ವಿಶೇಷ ಸೇವೆ ಸಲ್ಲಿಸಿ ಉಡುಪಿಗೆ ಪ್ರಯಾಣಿಸಿದರು.

ಹೆಗ್ಗಡೆ ಅವರ ಬೀಡಿನಲ್ಲಿ ಸ್ವಾಮೀಜಿಯ ಪಾದಪೂಜೆ ಮಾಡಿ ಗೌರವಿಸಲಾಯಿತು
ಧರ್ಮಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಸ್ವಾಗತಿಸಲಾಯಿತು
ಧರ್ಮಸ್ಥಳಕ್ಕೆ ಗುರುವಾರ ಭೇಟಿ ನೀಡಿದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರನ್ನು ಸ್ವಾಗತಿಸಲಾಯಿತು
ಸ್ವಾಮೀಜಿ ವೀರೇಂದ್ರ ಹೆಗ್ಗಡೆ ಮಾತುಕತೆ ನಡೆಸಿದರು
ಸ್ವಾಮೀಜಿ ವೀರೇಂದ್ರ ಹೆಗ್ಗಡೆ ಮಾತುಕತೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.