ADVERTISEMENT

ಒಮನ್ ರಾಜಧಾನಿ ಮಸ್ಕತ್‌ನಲ್ಲಿ ಅ.10ರಂದು ‘ಪೆಪೆರೆ ಪೆಪೆ ಢುಂ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:45 IST
Last Updated 9 ಅಕ್ಟೋಬರ್ 2025, 4:45 IST
ಸುದ್ದಿಗೋಷ್ಠಿಯಲ್ಲಿ ಡೆನಿಸ್ ಡಿಸಿಲ್ವ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಡೆನಿಸ್ ಡಿಸಿಲ್ವ ಮಾತನಾಡಿದರು   

ಮಂಗಳೂರು: ಆಮಿ ಆನಿ ಆಮ್ಚಿಂ ಸಂಘಟನೆ ಮೂಲಕ ಹುಟ್ಟಿಕೊಂಡಿರುವ ‘ಪೆಪೆರೆ ಪೆಪೆ ಢುಂ’ ಬ್ರಾಸ್ ಬ್ಯಾಂಡ್ ಸ್ಪರ್ಧೆಯ ಎರಡನೇ ಆವೃತ್ತಿಯು ಒಮನ್ ದೇಶದ ರಾಜಧಾನಿ ಮಸ್ಕತ್‌ನಲ್ಲಿ ಅ.10ರಂದು ನಡೆಯಲಿದೆ. ಕರಾವಳಿ 23 ಕಲಾವಿದರು ಭಾಗವಹಿಸಲಿದ್ದಾರೆ.

ಮಸ್ಕತ್‌ನ ಎಂಸಿಸಿಪಿ ಸಂಘಟನೆಯ ಅಧ್ಯಕ್ಷ ಲ್ಯಾನ್ಸಿ ಲೋಬೊ, ವೆಂಚರ್ ಎಂಟರ್‌ಟೇನ್‌ಮೆಂಟ್ ನೇತೃತ್ವದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ನಾಲ್ಕು ತಂಡಗಳು ಭಾಗವಹಿಸಲಿವೆ. ಕೊಂಕಣಿ ಹಾಡುಗಳು, ಬಾಯ್ಲಾ ನೃತ್ಯ, ವಾಲ್ಟ್ಜ್ ನೃತ್ಯ, ಜೈವ್ ನೃತ್ಯ, ಹುಲಿ ಕುಣಿತ ಮೊದಲಾದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ವಿಜೇತ ತಂಡಕ್ಕೆ 1,000 ರಿಯಾಲ್ (₹2.30 ಲಕ್ಷ), ಉಳಿದ ಮೂರು ತಂಡಗಳಿಗೆ 500 ರಿಯಾಲ್ (₹1.15 ಲಕ್ಷ) ನೀಡಲಾಗುತ್ತದೆ ಎಂದು ಆಮಿ ಆನಿ ಆಮ್ಚಿಂ ಸಂಘಟನೆ ಡೆನಿಸ್ ಡಿಸಿಲ್ವ, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳ್ತಂಗಡಿ ತಾಲ್ಲೂಕಿನ ಬದ್ಯಾರ್‌ನ ಅರುಣ್ ಸೆರಾವೊ ನೇತೃತ್ವದ ಬ್ರಾಸ್ ಬ್ಯಾಂಡ್ ತಂಡ ಭಾಗವಹಿಸಲಿದೆ. ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಪಾಲ್ಗೊಳ್ಳುವರು. ಬ್ರಾಸ್ ಬ್ಯಾಂಡ್‌ ಅನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 2024ರಲ್ಲಿ ಆಯೋಜಿಸಿದ್ದ ಪೆಪೆರೆ ಪೆಪೆ ಢುಂ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 20 ತಂಡಗಳು ಭಾಗವಹಿಸಿದ್ದವು ಎಂದು ಹೇಳಿದರು.

ADVERTISEMENT

ಸಂಘಟನೆಯ ಸಂತೋಷ್ ಡಿಕೋಸ್ತಾ, ಲೊಯ್ಡ್ ರೇಗೊ, ಮೆಲ್ವಿನ್ ಡೇಸಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.