ADVERTISEMENT

ಪಿಲ್ಯ: ಗಾಡ್ಗೀಳ್ ಕಲಾ ವೇದಿಕೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 12:39 IST
Last Updated 11 ಏಪ್ರಿಲ್ 2025, 12:39 IST
ಪಿಲ್ಯ ಗ್ರಾಮದ ಶ್ರೀಗೋಪಾಲಕೃಷ್ಣ ದೇವಸ್ಥಾನಕ್ಕೆ ವಿವಿಧ ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡಿದವರನ್ನು ಗೌರವಿಸಲಾಯಿತು
ಪಿಲ್ಯ ಗ್ರಾಮದ ಶ್ರೀಗೋಪಾಲಕೃಷ್ಣ ದೇವಸ್ಥಾನಕ್ಕೆ ವಿವಿಧ ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡಿದವರನ್ನು ಗೌರವಿಸಲಾಯಿತು   

ಬೆಳ್ತಂಗಡಿ: ‘ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವವರು ಸದಾ ನೆಮ್ಮದಿಯ, ಆರೋಗ್ಯಪೂರ್ಣ ಜೀವನ ನಡೆಸುತ್ತಾರೆ. ದಾನ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು’ ಎಂದು ರಾಮಕುಂಜ ಪ್ರೌಢಶಾಲೆಯ ಮುಖ್ಯಶಿಕ್ಷಕ, ಶೈಕ್ಷಣಿಕ ತರಬೇತುದಾರ ಸತೀಶ್ ಮರಾಠೆ ಹೇಳಿದರು.

ಪಿಲ್ಯ ಗ್ರಾಮದ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭಕ್ಕಾಗಿ ರಥಬೀದಿಯಲ್ಲಿ ನಿರ್ಮಿಸಲಾಗಿರುವ ಗಾಡ್ಗೀಳ್ ಕಲಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಳದಂಗಡಿಯ ವೈದ್ಯ ಡಾ.ಎನ್.ಎಂ.ತುಳಪುಳೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದೇವಳದ ತಂತ್ರಿ ಸಂತೋಷ್ ಕೇಳ್ಕರ್, ಆಡಳಿತ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ ಭಾಗವಹಿಸಿದ್ದರು.

ADVERTISEMENT

ದೇವಸ್ಥಾನಕ್ಕೆ ವಿವಿಧ ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡಿದ ಪಾಕತಜ್ಞ ದಿನೇಶ್ ಅಭ್ಯಂಕರ್ ಫಂಡಿಜೆ, ದಿನೇಶ್ ಫಾಟಕ್ ಫಂಡಿಜೆ, ಎಂಜಿನಿಯರ್ ಪ್ರಜ್ವಲ್ ಮೆಹೆಂದಳೆ ಬೆಂಗಳೂರು, ಸಾಮಾಜಿಕ ಅರಣ್ಯ ನಿವೃತ್ತ ಅಧಿಕಾರಿ ಗಜಾನನ ನಾತು ಸವಣಾಲು, ನಿವೃತ್ತ ಅಧ್ಯಾಪಕ ಗೋವಿಂದ ದಾಮಲೆ ಪೆರಡೇಲು, ಸುರೇಶ್ ಹೆಬ್ಬಾರ್ ಫಂಡಿಜೆ, ಮಾರ್ಗದರ್ಶಕ ಮುರಲೀಧರ ಗೋಖಲೆ ಸೂಳಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಂದ ನೃತ್ಯ, ಪಿಂಗಾರ ಕಲಾವಿದರಿಂದ ನಾಟಕ ಪ್ರದರ್ಶಿಸಲಾಯಿತು.

ಮಹೇಶ್ ಗೋಖಲೆ ವೇದಘೋಷ ಮಾಡಿದರು. ಪ್ರವೀಣಚಂದ್ರ ಮೆಹೆಂದಳೆ ಸ್ವಾಗತಿಸಿದರು. ಸಹಮೊಕ್ತೇಸರ ಚಂದ್ರಕಾಂತ ಗೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಆಠವಳೆ ವಂದಿಸಿದರು. ಶಿಕ್ಷಕ ಗಣರಾಜ ಶೆಂಡ್ಯೆ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.