ADVERTISEMENT

ಮಂಗಳೂರು: ಕಾರಿನ ಟೈರ್ ಬದಲಿಸಲು ನೆರವಾದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:05 IST
Last Updated 26 ಜುಲೈ 2021, 3:05 IST
ಮಹಿಳೆಯ ಕಾರಿನ ಟೈರ್ ಬದಲಿಸಲು ನೆರವಾದ ನಾಗುರಿ ಸಂಚಾರಿ ಠಾಣೆಯ ಪೊಲೀಸರು
ಮಹಿಳೆಯ ಕಾರಿನ ಟೈರ್ ಬದಲಿಸಲು ನೆರವಾದ ನಾಗುರಿ ಸಂಚಾರಿ ಠಾಣೆಯ ಪೊಲೀಸರು   

ಮಂಗಳೂರು: ಮಹಿಳೆಯೊಬ್ಬರು ಮಗುವಿನೊಂದಿಗೆ ಕಾರಿನಲ್ಲಿ ಹೋಗುತ್ತಿರುವಾಗ ಟೈರ್ ಪಂಕ್ಚರ್ ಆಗಿ ಪರದಾಡುತ್ತಿರುವುದನ್ನು ಗಮನಿಸಿದ ನಾಗುರಿ ಸಂಚಾರಿ ಠಾಣಾ ಪೊಲೀಸರು ಟೈರ್ ಬದಲಿಸಲು ನೆರವಾಗಿ, ಮಾನವೀಯತೆ ಮೆರೆದರು.

ಕುಂದಾಪುರದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಬರುತ್ತಿರುವಾಗ ಪಂಪ್‌ವೆಲ್‌ ಬಳಿ ಟೈರ್ ಪಂಕ್ಚರ್ ಆಗಿತ್ತು. ಮಹಿಳೆ ಅಸಹಾಯಕಳಾಗಿರುವುದನ್ನು ಗಮನಿಸಿದ ಹೈವೆ ಪೆಟ್ರೋಲಿಂಗ್‌ನಲ್ಲಿದ್ದ ಪೊಲೀಸರು, ಕಾರಿನ ಬಳಿ ಬಂದು ಟೈರ್ ಬದಲಿಸಿಕೊಟ್ಟರು. ಸಂಚಾರಿ ಠಾಣೆ ಎಎಸ್ಐ ಲಸ್ರಾದೊ, ಸಿಬ್ಬಂದಿ ಮಹೇಶ್ ಹಾಗೂ ಗೃಹ ರಕ್ಷಕ ದಳದ ಆಸಿಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT