ADVERTISEMENT

ಪವರ್ ಲಿಫ್ಟಿಂಗ್‌: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:02 IST
Last Updated 27 ಮೇ 2025, 15:02 IST
ಬ್ರಹ್ಮಾವರದಲ್ಲಿ ನಡೆದ ಮಂಗಳೂರು ವಿವಿ ಅಂತರಕಾಲೇಜು ಪುರುಷರ ಹಾಗೂ ಮಹಿಳೆಯರ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು
ಬ್ರಹ್ಮಾವರದಲ್ಲಿ ನಡೆದ ಮಂಗಳೂರು ವಿವಿ ಅಂತರಕಾಲೇಜು ಪುರುಷರ ಹಾಗೂ ಮಹಿಳೆಯರ ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೂಡುಬಿದಿರೆಯ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿತು   

ಮೂಡುಬಿದಿರೆ: ಮಂಗಳೂರು ವಿವಿ ಹಾಗೂ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಆಶ್ರಯದಲ್ಲಿ ಮೇ 23ರಿಂದ 24ರವರೆಗೆ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಆಳ್ವಾಸ್ ಕಾಲೇಜು ಸತತ 24ನೇ ಬಾರಿ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ತಂಡ ಪ್ರಶಸ್ತಿ ಗೆದ್ದುಕೊಂಡು ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮಹಿಳಾ ವಿಭಾಗದಲ್ಲಿ 4 ಚಿನ್ನ, 3 ಬೆಳ್ಳಿ, ಪುರುಷರ ವಿಭಾಗದಲ್ಲಿ 4 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದೆ. ಮಹಿಳಾ ವಿಭಾಗದ 47ಕೆ.ಜಿ. ದೇಹತೂಕ ಸ್ಪರ್ಧೆಯಲ್ಲಿ ಶ್ರಾವ್ಯ ಚಿನ್ನ, ಚಂದ್ರಿಕಾ ಬೆಳ್ಳಿ, ಅನುಷಾ ಚಿನ್ನ, ಸೀಮಾ ಚಿನ್ನ, ಮಲ್ಲಮ್ಮ ಬೆಳ್ಳಿ, ವಿತಶ್ರೀ ಬೆಳ್ಳಿ ಮತ್ತು ನಾಗಶ್ರೀ ಚಿನ್ನದ ಪದಕ ಗೆದ್ದಿದ್ದಾರೆ.

ಪುರುಷರ ವಿಭಾಗದಲ್ಲಿ ಹಾಲೇಶ್ ಚಿನ್ನ, ರಮೇಶ್ ಬೆಳ್ಳಿ, ಸಂತೋಷ್ ಚಿನ್ನ, ಗಣೇಶ್ ಕಂಚು, ಪ್ರತ್ಯುಶ್ ಬೆಳ್ಳಿ, ಶಶಾಂಕ್ ಕಂಚು, ನಾಗೇಂದ್ರ ಅಣ್ಣಪ್ಪ ಚಿನ್ನ, ಜೋಶುವ ರಾಜಕುಮಾರ್ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ‘ಕೂಟದ ಬೆಸ್ಟ್ ಲಿಫ್ಟರ್ ವೈಯಕ್ತಿಕ ಪ್ರಶಸ್ತಿ’ಯನ್ನು ಆಳ್ವಾಸ್ ಕಾಲೇಜಿನ ನಾಗಶ್ರೀ ಪಡೆದುಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.