ಸುಳ್ಯ (ದಕ್ಷಿಣ ಕನ್ನಡ) : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಹತ್ಯೆ ಬಳಿಕ ಬಂದ್, ಪ್ರತಿಭಟನೆ, ಲಾಠಿ ಚಾರ್ಜ್ ನಡೆದು ಉದ್ವಿಗ್ನ ಸ್ಥಿತಿಯತ್ತ ತಿರುಗಿದ್ದ ಬೆಳ್ಳಾರೆ ಪೇಟೆ ಗುರುವಾರ ಸಹಜ ಸ್ಥಿತಿಯತ್ತ ಮರಳಿದೆ.
ಬೆಳಿಗಿನಿಂದ ಪೇಟೆಯು ಸಹಜ ಸ್ಥಿತಿಗೆ ಮರಳಿದ್ದು ಅಂಗಡಿ ಮುಂಗಡಿಗಳು ತೆರೆದು ಕೊಂಡಿವೆ. ವಾಹನ ಸಂಚಾರ, ಜನ ಸಂದಣಿ ಮಾಮೂಲಿಯಂತೆ ಇದೆ. ಶಾಲಾ ಕಾಲೇಜುಗಳು ತೆರೆದಿವೆ. ಬೆಳ್ಳಾರೆ ಪೇಟೆ ಮತ್ತು ಪರಿಸರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.
ಬುಧವಾರ ಪ್ರವೀಣ್ ನೆಟ್ಟಾರು ಮೃತದೇಹದ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರು ಸೇರಿದ್ದರು. ಅಂತಿಮ ದರ್ಶನದ ಸ್ಥಳಕ್ಕೆ ಬಂದ ಬಿಜೆಪಿ ಮುಖಂಡರ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ ಕಾರಣ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಕಲ್ಲು ತೂರಾಟ, ಲಾಠಿ ಚಾರ್ಜ್ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಪರಿಸ್ಥಿತಿ ನಿಭಾಯಿಸಿ ಹತೋಟಿಗೆ ತಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.