ADVERTISEMENT

ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಆಗ್ರಹ: ಮಂಗಳೂರಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 6:56 IST
Last Updated 4 ಡಿಸೆಂಬರ್ 2024, 6:56 IST
<div class="paragraphs"><p>ಮಂಗಳೂರಿನಲ್ಲಿ ಪ್ರತಿಭಟನೆ</p></div>

ಮಂಗಳೂರಿನಲ್ಲಿ ಪ್ರತಿಭಟನೆ

   

ಮಂಗಳೂರು: ಬಾಂಗ್ಲಾದೇಶದಲ್ಲಿ‌ ಹಿಂದೂಗಳ‌ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕು ಮತ್ತು ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಮೆರವಣಿಗೆ ನಡೆಯಿತು.

ಸಾಧು ಸಂತರ ರಕ್ಷಣೆ ಆಗಬೇಕು, ಮಾನವ ಹಕ್ಕು ರಕ್ಷಿಸಬೇಕು ಎಂದು ಪ್ರತಿಭಟನಕಾರರು ಘೋಷಣೆ ಕೂಗಿದರು.

ADVERTISEMENT

ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ದಿಂದ ಹೊರಟ ಮೆರವಣಿಗೆ ಮಿನಿ ವಿಧಾನ ಸೌಧದ ಎದುರು ಸಭೆಯಾಗಿ ಪರಿವರ್ತನೆಗೊಂಡಿತು.

ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮಠದ ಮೋಹನದಾಸ ಸ್ವಾಮೀಜಿ, ವಿವಿಧ ಮಠಗಳ ಮಠಾಧೀಶರು, ಇಸ್ಕಾನ್ ಪ್ರಮುಖರು ಭಾಗವಹಿಸಿದ್ದ ಸಭೆಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸ್ ಪಠಣ ನಡೆಯಿತು.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮಾತನಾಡಿ, ‘ಬಾಂಗ್ಲಾದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಇಸ್ಲಾಂ ಜಿಹಾದಿ ಸಂಘಟನೆ ಇದ್ದರೆ ಏನಾಗಬಹುದು ಎಂಬುದಕ್ಕೆ ಬಾಂಗ್ಲಾದೇಶದ ಉದಾಹರಣೆ ನಮ್ಮ‌ಮುಂದೆ ಇದೆ. ಹಿಂದೂಗಳು, ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳಲ್ಲಿ ಆರು ಸಾವಿರ ದಾಳಿಗಳು ನಡೆದಿವೆ‌. ಹಿಂದೂಗಳ‌ ಮೇಲಿನ ದಾಳಿಯ ಹಿಂದೆ ಅಂತರರಾಷ್ಟ್ರೀಯ ‌ಮಟ್ಟದ ಷಡ್ಯಂತ್ರ ಅಡಗಿದೆ. ಜಗತ್ತನ್ನು ಇಸ್ಲಾಮೀಕರಣ ಮಾಡಬೇಕೆಂದು ಹಿಂದುತ್ವದ ನಾಶ ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಇಸ್ಲಾಂ ಅಧಿಕಾರ‌ ಹಿಡಿದ ಯಾವ ದೇಶವನ್ನೂ ಬಿಟ್ಟಿಲ್ಲ, ಅಲ್ಲಿಯ ಸಂಸ್ಕೃತಿ, ನಾಗರಿಕತೆ, ಪರಂಪರೆ ನಾಶ ಮಾಡಿದೆ. ಭಾರತದ ಹಿಂದೂಗಳಿಗೆ ಇದು ಪಾಠವಾಗಿದೆ’ ಎಂದರು.

ಹಿಂದೂಗಳ ಜನಸಂಖ್ಯೆ ‌ಕಡಿಮೆ‌ ಆದಲ್ಲೆಲ್ಲ ಹಿಂದೂಗಳು ಪೆಟ್ಟು ತಿನ್ನುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯನ್ನೇ ಗಮನಿಸಿದರೆ ಅವರ ಜನಸಂಖ್ಯೆ ಶೇ 35ಕ್ಕೆ ಬಂದಿದೆ. ನಾಳೆ ಇಲ್ಲಿಗೂ ಬಾಂಗ್ಲಾದೇಶದ ಪರಿಸ್ಥಿತಿ ಬರಬಹುದು ಎಂಬುದನ್ನು ಜಿಲ್ಲೆಯ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.