ADVERTISEMENT

ಯುವ ವಕೀಲರೊಬ್ಬರನ್ನು ರಾತ್ರೋ ರಾತ್ರಿ ಬಂಧಿಸಿ ಹಲ್ಲೆ: ಪಿಎಸ್‌ಐ ಸುತೇಶ್ ಅಮಾನತು

ಯುವ ವಕೀಲನ ಮೇಲೆ ದೌರ್ಜನ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 5:06 IST
Last Updated 12 ಡಿಸೆಂಬರ್ 2022, 5:06 IST
   

ಮಂಗಳೂರು: ಯುವ ವಕೀಲರೊಬ್ಬರನ್ನು ರಾತ್ರೋ ರಾತ್ರಿ ಬಂಧಿಸಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಪಿಎಸ್‌ಐ ಸುತೇಶ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಸುತೇಶ್‌ ಅವರು ಯುವ ವಕೀಲ ಕುಲ್‌ದೀಪ್‌ ಅವರನ್ನು ಕಳವು ಪ್ರಕರಣ ಸಂಬಂಧ ಇತ್ತೀಚೆಗೆ ಬಂದಿಸಿದ್ದರು. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ‘ವ್ಯಕ್ತಿಯ ಬಂಧನ ನಡೆಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಅನುಸರಿಸಬೇಕಾದ ಕ್ರಮಗಳನ್ನುಪಿಎಸ್‌ಐ ಸುತೇಶ್‌ ಉಲ್ಲಂಘಿಸಿದ್ದಾರೆ. ಇದೊಂದು ಪೊಲೀಸ್‌ ದೌರ್ಜನ್ಯ’ ಎಂದು ಆರೋಪಿಸಿ ವಕೀಲ ಸಮುದಾಯ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಬಳಿಕ ಸುತೇಶ್‌ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಲು ಡಿವೈಎಸ್‌ಪಿ ಅವರನ್ನು ನೇಮಿಸಲಾಗಿತ್ತು.

ಆ ಬಳಿಕವೂ ಸಮಾಧಾನಗೊಳ್ಳದ ಮಂಗಳೂರು ವಕೀಲರ ಸಂಘದ ಪ್ರಮುಖರು, ‘ಸುತೇಶ್‌ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.