ADVERTISEMENT

ಪೆರ್ನಾಜೆಯಲ್ಲಿ ಕಾಡಾನೆ ದಾಳಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:06 IST
Last Updated 12 ಫೆಬ್ರುವರಿ 2026, 7:06 IST
ಪುತ್ತೂರು ತಾಲ್ಲೂಕಿನ ಕುಮಾರ್ ಪೆರ್ನಾಜೆ ಅವರ ತೋಟದಲ್ಲಿ ಕಾಡಾನೆಗಳು ಕೃಷಿ ಹಾನಿ ಮಾಡಿರುವುದು
ಪುತ್ತೂರು ತಾಲ್ಲೂಕಿನ ಕುಮಾರ್ ಪೆರ್ನಾಜೆ ಅವರ ತೋಟದಲ್ಲಿ ಕಾಡಾನೆಗಳು ಕೃಷಿ ಹಾನಿ ಮಾಡಿರುವುದು   

ಪುತ್ತೂರು: ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಪರಿಸರಕ್ಕೆ 4 ತಿಂಗಳ ಬಳಿಕ ಮತ್ತೆ ಕಾಡಾನೆಗಳು ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿವೆ.

ರಾಘವೇಂದ್ರ ಭಟ್, ಗೋಪಾಲಕೃಷ್ಣ ಕಲ್ಲೂರಾಯ, ಕುಮಾರ್ ಪೆರ್ನಾಜೆ ಅವರ ತೋಟಗಳಿಗೆ ಮಂಗಳವಾರ ರಾತ್ರಿ ಆನೆಗಳು ಲಗ್ಗೆಯಿಟ್ಟಿವೆ. ರಾಘವೇಂದ್ರ ಭಟ್ ಅವರ 8 ಅಡಿಕೆ ಮರ, 1 ತೆಂಗಿನ ಮರ ಹಾಗೂ 25ಕ್ಕೂ ಅಧಿಕ ಬಾಳೆಗಿಡಗಳನ್ನು ಮುರಿದು ಹಾಕಿವೆ. ಗೋಪಾಲಕೃಷ್ಣ ಕಲ್ಲೂರಾಯರ ತೋಟದಲ್ಲಿ ತೆಂಗಿನ ಮರವೊಂದನ್ನು ಮುರಿದು ಹಾಕಿವೆ.

ಕುಮಾರ್ ತೋಟದಲ್ಲಿ 1 ತೆಂಗಿನ ಮರ, 2 ಅಡಿಕೆ ಮರ, ಬಾಳೆಗಿಡ, ದೀವಿ ಹಲಸು ಮರಗಳು ಹಾಗೂ ತೋಟದ ಪಕ್ಕದಲ್ಲಿದ್ದ ಈಚಲು ಮರವನ್ನು ಮುರಿದು ತೋಟದ ಕೆರೆಯಲ್ಲಿ ಈಜಾಡಿ ನೂಜಿಬೈಲು, ಅಂಕೋತಿಮಾರು ಕಡೆಗೆ ತೆರಳಿರುವುದಾಗಿ ಮಾಹಿತಿ ಲಭಿಸಿದೆ ಎಂದು ಕುಮಾರ್ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.