
ಪ್ರಜಾವಾಣಿ ವಾರ್ತೆ
ಪುತ್ತೂರು: ಎಂಡೋಸಲ್ಫಾನ್ ಪೀಡಿತೆ, ತಾಲ್ಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ದರ್ಖಾಸು ನಿವಾಸಿ ರೇಷ್ಮಾ ಎಂ (22) ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಅಜ್ಜಿಕಲ್ಲು ದರ್ಖಾಸು ನಿವಾಸಿ ಲಕ್ಷ್ಮಣನಾಯ್ಕ ಮತ್ತು ಸರಸ್ವತಿ ದಂಪತಿಯ ಪುತ್ರಿಯಾಗಿದ್ದ ರೇಷ್ಮಾ ಅವರಿಗೆ ಹುಟ್ಟಿನಿಂದಲೇ ಕುತ್ತಿಗೆ ಭಾಗದಲ್ಲಿ ಬಲ ಇರಲಿಲ್ಲ. ಸೀಳು ತುಟಿ ಹಾಗೂ ಕೈಕಾಲುಗಳ ಬಲಹೀನತೆಯ ಜತೆಗೆ ದೇಹದ ಬೆಳವಣಿಗೆಯೂ ಆಗಿರಲಿಲ್ಲ. ಮಲಗಿದ್ದಲ್ಲೇ ಬದುಕು ಕಳೆಯುವ ಅತಂತ್ರ ಸ್ಥಿತಿ ಅವರದ್ದಾಗಿತ್ತು. ಆಕೆಯ ದೈನಂದಿನ ದಿನಚರಿ ಸೇರಿದಂತೆ ಲಾಲನೆ-ಪಾಲನೆಯ ಎಲ್ಲಾ ಜವಾಬ್ದಾರಿಯನ್ನು ಪೋಷಕರೇ ನಿರ್ವಹಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.